ಅಹಮದಾಬಾದ್ : ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೂತನ ಸಚಿವ ಸಂಪುಟ ಶುಕ್ರವಾರ ರಚನೆಯಾಗಲಿದ್ದು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ, ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಸೇರಿದಂತೆ ಇಪ್ಪತ್ತೈದು ಮಂದಿ ಸಚಿವರಾಗಿ ಅಹಮದಾಬಾದ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿಯಾಗಿ ನೂತನ ಸಂಪುಟಕ್ಕೆ ಸೇರಿಸಿಕೊಳ್ಳಲಿರುವ ಸಚಿವರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸುತ್ತಿರುವ 25 ಮಂದಿ ಸಚಿವರಲ್ಲಿ, ಹಿಂದಿನ ಕ್ಯಾಬಿನೆಟ್ ನಲ್ಲಿದ್ದ ಆರು ಮಂದಿಯನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಹರ್ಷ ಸಾಂಘ್ವಿ,ಕುಂವರ್ಜಿ ಬವಲಿಯಾ, ಪ್ರಫುಲ್ ಪನ್ಸೇರಿಯಾ, ರಿಷಿಕೇಶ್ ಪಟೇಲ್, ಪರಶೋತ್ತಮ್ ಸೋಲಂಕಿ ಮತ್ತು ಕನುಭಾಯಿ ದೇಸಾಯಿ ಅವರಿಗೆ ಮತ್ತೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ತ್ರಿಕಮ್ ಚಾಂಗ್, ಸ್ವರೂಪ್ ಜಿ ಠಾಕೂರ್, ಪ್ರವೀಣ್ ಮಾಲಿ, ಪಿ ಸಿ ಬರಂಡ,ಕಾಂತಿಲಾಲ್ ಅಮೃತಿಯಾ, ಅರ್ಜುನ್‌ಭಾಯ್ ಮೊದ್ವಾಡಿಯಾ, ಪ್ರದ್ಯುಮ್ನ ವಾಜ್,ಕೌಶಿಕ್ ವೆಕಾರಿಯಾ, ಜಿತೇಂದ್ರಭಾಯಿ ವಘಾನಿ, ರಮಣಭಾಯ್ ಸೋಲಂಕಿ, ಕಮಲೇಶಭಾಯ್ ಪಟೇಲ್, ಸಂಜಯ್ ಸಿಂಗ್ ಮಹಿದಾ, ರಮೇಶಭಾಯಿ ಕಟಾರ, ಈಶ್ವರ್ ಸಿಂಗ್ ಪಟೇಲ್,ಜೈರಾಂಭಾಯಿ ಗಮಿತ್, ನರೇಶ್ ಪಟೇಲ್, ಶಾಸಕಿಯರಾದ ರಿವಾಬಾ ಜಡೇಜಾ, ದರ್ಶನಾ ವಘೇಲಾ,ಮನೀಶಾ ವಕೀಲ್ ಅವರಿಗೆ ಅವಕಾಶ ನೀಡಲಾಗುತ್ತಿದೆ. 182 ಸದಸ್ಯರ ಬಲದ ಗುಜರಾತ್ ವಿಧಾನಸಭೆಯಲ್ಲಿ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಗರಿಷ್ಠ 27 ಸಚಿವರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಜಗದೀಶ್ ವಿಶ್ವಕರ್ಮ ಅವರನ್ನು ನೇಮಿಸಲಾಗಿತ್ತು.