image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಪರೇಷನ್ ಸಿಂಧೂರದಲ್ಲಿ F16, JF 17 ಸೇರಿ ಪಾಕ್‌ ನ 10 ಯುದ್ಧ ವಿಮಾನ ನಾಶ: ಮಾರ್ಷಲ್‌ ಸಿಂಗ್

ಆಪರೇಷನ್ ಸಿಂಧೂರದಲ್ಲಿ F16, JF 17 ಸೇರಿ ಪಾಕ್‌ ನ 10 ಯುದ್ಧ ವಿಮಾನ ನಾಶ: ಮಾರ್ಷಲ್‌ ಸಿಂಗ್

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್‌ ಮೇಲೆ ನಡೆಸಿದ ಆಪರೇಶನ್‌ ಸಿಂದೂರ ದಾಳಿಗೆ ಬೆಚ್ಚಿಬಿದ್ದಿದ್ದ ಪಾಕ್‌ ಕದನ ವಿರಾಮ ಘೋಷಿಸುವಂತೆ ಬೇಡಿಕೊಂಡಿತ್ತು. ಅಷ್ಟೇ ಅಲ್ಲ ದಾಳಿ ವೇಳೆ ಪಾಕ್‌ ನ 10 ಯುದ್ಧ ವಿಮಾನಗಳು ಸೇರಿದಂತೆ 12 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂಬ ಮಾಹಿತಿಯನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಬಹಿರಂಗಗೊಳಿಸಿದ್ದಾರೆ. ಆಪರೇಶನ್‌ ಸಿಂದೂರ ವೇಳೆ ಭಾರತದ ವಾಯುಪಡೆ ಪಾಕ್‌ ನ ಅಮೆರಿಕ ನಿರ್ಮಿತ ಎಫ್‌ 16ಎಸ್‌, ಚೀನಾ ನಿರ್ಮಿತ ಜೆಎಫ್‌ 17ಎಸ್‌ ಸೇರಿದಂತೆ 8-10 ಯುದ್ಧ ವಿಮಾನಗಳನ್ನು ನಾಶಗೊಳಿಸಿರುವ ಮಾಹಿತಿಯನ್ನು ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.

"300 ಕಿ.ಮೀ. ಗಿಂತ ಹೆಚ್ಚು ದೂರ ಒಳ ಪ್ರವೇಶಿಸಿ ದಾಳಿ ಮಾಡಿದ ಒಂದು ದೀರ್ಘ-ಶ್ರೇಣಿಯ ದಾಳಿಯ ಬಗ್ಗೆ ಸ್ಪಷ್ಟ ಪುರಾವೆಗಳು ನಮ್ಮಲ್ಲಿವೆ, ಅದು AEW&C ಅಥವಾ SIGINT ವಿಮಾನ ಜೊತೆಗೆ F-16 ಮತ್ತು JF-17 ಶ್ರೇಣಿಯ ಐದು ಹೈಟೆಕ್ ಯುದ್ಧವಿಮಾನಗಳೂ ಆಗಿದ್ದವು" ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಹೇಳಿದರು. ಸುಮಾರು 300 ಕಿಲೋ ಮೀಟರ್‌ ನಷ್ಟು ಪಾಕ್‌ ಪ್ರದೇಶದೊಳಕ್ಕೆ ನುಗ್ಗಿ ಭಾರತೀಯ ವಾಯುಪಡೆ ದಾಳಿ ನಡೆಸಿ ಗುರಿ ಸಾಧಿಸಿರುವುದು ನಮ್ಮ ಸೇನೆಯ ಸಾಹಸಕ್ಕೆ ಸಾಕ್ಷಿಯಾಗಿದೆ ಎಂದರು. ದಾಳಿಯಲ್ಲಿ ಪಾಕ್‌ ನ ಯುದ್ಧ ವಿಮಾನ ಸೇರಿದಂತೆ ನಾಲ್ಕು ಸ್ಥಳಗಳಲ್ಲಿದ್ದ ರಾಡಾರ್‌ ಸೆಂಟರ್‌, ಕಂಟ್ರೋಲ್‌ ಸೆಂಟರ್‌ ಗಳನ್ನು ಧ್ವಂಸಗೊಳಿಸಲಾಗಿತ್ತು. ಅಲ್ಲದೇ ಎರಡು ವಿಮಾನ ರನ್‌ ವೇ, ಸರ್‌ ಫೇಸ್‌ ಟು ಏರ್‌ ಮಿಸೈಲ್‌ ಸಿಸ್ಟಮ್‌ ಅನ್ನು ನಾಶಗೊಳಿಸಲಾಗಿತ್ತು ಎಂದು ಮಾರ್ಷಲ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ