image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಐ ಲವ್ ಮೊಹಮ್ಮದ್ ಪ್ರತಿಭಟನೆಯ ಪ್ರಚೋದನಾತ್ಮಕ ಹೇಳಿಕೆಯ ಮೌಲ್ವಿ ವಿರುದ್ಧ ನುಗ್ಗಿದ ಯೋಗಿ ಬುಲ್ಡೋಜರ್

ಐ ಲವ್ ಮೊಹಮ್ಮದ್ ಪ್ರತಿಭಟನೆಯ ಪ್ರಚೋದನಾತ್ಮಕ ಹೇಳಿಕೆಯ ಮೌಲ್ವಿ ವಿರುದ್ಧ ನುಗ್ಗಿದ ಯೋಗಿ ಬುಲ್ಡೋಜರ್

ಉತ್ತರ ಪ್ರದೇಶ : ಭಾರತದಲ್ಲಿ ಇತ್ತೀಚೆಗೆ ಐ ಲವ್ ಮೊಹಮ್ಮದ್ ಭಾರಿ ಟ್ರೆಂಡ್ ಆಗಿತ್ತು. ಈ ಟ್ರೆಂಡ್ ಏನು ಎಂದು ತಿಳಿದುಕೊಳ್ಳುವ ಮುಂಚೆ ಅಭಿಯಾನ ಮುದುಡಿತ್ತು. ಸೆಪ್ಟೆಂಬರ್ 26ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಪ್ರತಿಭಟನೆ ಕಾವು ಪಡೆದಿತ್ತು. ಕಲ್ಲೂ ತೂರಾಟ, ಹಿಂಸಾಚಾರ ನಡೆಸಿದ್ದರು. ಹಲವು ಪೊಲೀಸರು ಗಾಯಗೊಂಡಿದ್ದರು. ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿತ್ತು. ಏಕಾಏಕಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿತ್ತು. ಈ ಪ್ರತಿಭಟನೆಗೆ ಪ್ರಚೋದನೆ ನೀಡಿದ, ಬೆಂಬಲಿಸಿದ ಅಲಾ ಹಜ್ರತ್ ದರ್ಗಾ ಮೌಲನಾ ಮೊಹ್ಸಿನ್ ರಾಜಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರತಿಭಟನೆ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರದಲ್ಲಿರುವುದು ಯಾರು ಎಂದು ಗೊತ್ತಾ ಎಂದು ಮಹತ್ವದ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಅರೆಸ್ಟ್ ಆಗಿರುವ ಮೌಲಾನ ಮೊಹ್ಸಿನ್ ಕಟ್ಟಡಗಳ ಮೇಲೆ ಯುಪಿ ಬುಲ್ಡೋಜರ್ ಘರ್ಜಿಸಿದೆ. ಮೌಲನಾ ಮೊಹ್ಸಿನ್ ಅಕ್ರಮ ಕಟ್ಟಡಗಳು, ಮನೆಗಳ ಮೇಲೆ ಬುಲ್ಡೋಜರ್ ನುಗ್ಗಿದೆ. ಕಟ್ಟಡಗಳು ಧ್ವಂಸಗೊಳಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಬಿಗಿ ಭದ್ರತೆಯಲ್ಲಿ ಯುಪಿ ಪೊಲೀಸರು ಬುಲ್ಡೋಜರ್ ನುಗ್ಗಿಸಿದ್ದಾರೆ.

ಭಾರತದಲ್ಲಿ ಏಕಾಏಕಿ ಐ ಲವ್ ಮೊಹಮ್ಮದ್ ಟ್ರೆಂಡ್ ಆಗಿತ್ತು. ಎಲ್ಲರು ಐ ಲವ್ ಮೊಹಮ್ಮದ್ ಎಂದು ಪ್ಲಕಾರ್ಡ್ ಹಿಡಿದು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆ ಕಾವು ಪಡೆದುಕೊಂಡ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಹಿಂದೂ ಹಬ್ಬಗಳು, ಧಾರ್ಮಿಕ ಆಚರಣೆಗಳು ಬಂದಾಗ, ಕಲ್ಲು ತೂರಾಟ, ಹಿಂಸಾಚಾರ ನಡೆಯುತ್ತದೆ. ಕೆಲವರಿಗೆ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಿದಲ್ಲಿದೆ ಅನ್ನೋದು ಗೊತ್ತಿದೆಯಾ? ಕೆಲವರಿಗೆ ಡೆಂಟಿಂಗ್ ಹಾಗೂ ಪೈಟಿಂಗ್ ಆಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಕೆಲವರು ಇಡೀ ಸಮಾಜವನ್ನು ಆತಂಕದಲ್ಲಿಡಲು, ತಮ್ಮ ಗುರಿಸಾಧನೆಗೆ ಬಳಸಿಕೊಳ್ಳವು ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿನ ಶಾಂತಿ ಕದಡುವುದು, ನಿಯಮ ಉಲ್ಲಂಘಿಸಿದರೆ ಇದು ಯಾವ ಸರ್ಕಾರ ಎಂದು ಗೊತ್ತಿರಲಿ. ಒಂದು ತಿಳಿದುಕೊಳ್ಳಿ, ನಾವು ನಿಮಗೆ ಹತ್ತು ಪಟ್ಟು ತಯಾರಾಗಿದ್ದೇವೆ. ಎಲ್ಲವನ್ನೂ ನಿಭಾಯಿಸುತ್ತೇವೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ. ಕಲ್ಲುತೂರಾಟ ಸೇರಿದಂತೆ ಹಿಂಸಾಚಾರದ ಪ್ರತಿಭಟನೆ ನಡೆಸಿದ 56ಕ್ಕೂ ಹೆಚ್ಚು ಮಂದಿಯನ್ನು ಉತ್ತರ ಪ್ರದೇಶ ಸರ್ಕಾರ ಬಂಧಿಸಿದೆ.

Category
ಕರಾವಳಿ ತರಂಗಿಣಿ