image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತಕ್ಕೆ ಕಚ್ಚಾತೈಲದ ಬೆಲೆಯಲ್ಲಿ ನಂಬಲಸಾಧ್ಯವಾದ ರಿಯಾಯಿತಿ ಘೋಷಿಸಿದ ರಷ್ಯಾ

ಭಾರತಕ್ಕೆ ಕಚ್ಚಾತೈಲದ ಬೆಲೆಯಲ್ಲಿ ನಂಬಲಸಾಧ್ಯವಾದ ರಿಯಾಯಿತಿ ಘೋಷಿಸಿದ ರಷ್ಯಾ

ಮಾಸ್ಕೋ: ಭಾರತ ಮತ್ತು ರಷ್ಯಾದ ಕಚ್ಚಾತೈಲ ಸಂಬಂಧಕ್ಕೆ ಅಂತ್ಯಹಾಡಬೇಕು ಎಂದು ಅಮೆರಿಕ ಅದೆಷ್ಟು ಪ್ರಯತ್ನ ಮಾಡುತ್ತದೆಯೋ, ಅದಕ್ಕೆ ವ್ಯತರಿಕ್ತವಾಗಿ ಉಭಯ ರಾಷ್ಟ್ರಗಳ ತೈಲ ಸಂಬಂಧ ಅಷ್ಟೇ ಗಟ್ಟಿಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಈ ದೋಸ್ತಿಗೆ ಸಾಕ್ಷಿಯಾಗಿ ಭಾರತಕ್ಕೆ ಕಚ್ಚಾತೈಲ ರಿಯಾಯಿತಿ ಘೋಷಿಸಿದ್ದ ರಷ್ಯಾ, ಈಗ ಮತ್ತಷ್ಟು ರಿಯಾಯಿತಿಗೆ ಮುಂದಾಗಿದೆ. ಭಾರತ ಇನ್ನೂ ಅಮೆರಿಕದ ಸುಂಕದ ಹೊರೆಯನ್ನು ಎದುರಿಸುತ್ತಿರುವುದರಿಂದ, ಭಾರತಕ್ಕೆ ರಷ್ಯಾದ ತೈಲದ ಬೆಲೆ ಬ್ಯಾರೆಲ್‌ಗೆ 3 ರಿಂದ 4 ಅಮೆರಿಕನ್‌ ಡಾಲರ್‌ನಷ್ಟು ಕಡಿಮೆ ಮಾಡಲು ರಷ್ಯಾ ನಿರ್ಧರಿಸಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್‌

ತಿಂಗಳಲ್ಲಿ ಲೋಡ್ ಆಗುವ ಸರಕುಗಳಿಗೆ, ರಷ್ಯಾದ ಉರಲ್ ದರ್ಜೆಯ ಬೆಲೆಯನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ. ಇತ್ತೀಚಿಗೆ ಚೀನಾದ ಟಿಯಾಂಜಿನ್‌ ನಗರದಲ್ಲಿ ನಡೆದಿದ್ದ ಶಾಂಘಃಐ ಸಹಕಾರ ಒಕ್ಕೂಟ (ಎಸ್‌ಸಿಒ)ದ ಶೃಂಗಸಭೆಯಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ದ್ವಿಪಕ್ಷೀಯ ಸಭೆ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರಷ್ಯಾ ಮತ್ತೆ ಭಾರತಕ್ಕೆ ಕಚ್ಚಾತೈಲ ದರದಲ್ಲಿ ರಿಯಾಯಿತಿ ಘೋಷಿಸಿರುವುದು, ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಷ್ಯಾದ ತೈಲವನ್ನು ಖರೀದಿಸಿ ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡಿದ ಆರೋಪದ ಮೆಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಭಾರತದ ಸರಕುಗಳ ಮೇಳೆ ಶೇ. 50ರಷ್ಟು ಸುಂಕ ಹೇರಿದೆ. ಅಮೆರಿಕದ ಈ ಸುಂಕ ಹೇರಿಕೆಯನ್ನು ವಿರೋಧಿಸಿರುವ ಭಾರತ, ತನ್ನ ಕಾರ್ಯತಂತ್ರ ಬದಲಾಯಿಸಿಕೊಂಡಿದ್ದು, ರಷ್ಯಾ ಮತ್ತು ಚೀನಾದೊಂದಿಗೆ ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ. ಹೆಚ್ಚುವರಿ ಸುಂಕಗಳನ್ನು ಹೇರುವ ಭಾರತವನ್ನು ಮಣಿಸಬಹುದು ಎಂದುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ತಮ್ಮ ಸುಂಕ ಹೇರಿಕೆ ತಮಗೇ ತಿರುಗುಬಾಣ ಆಗುತ್ತಿರುವುದನ್ನು ಕಂಡು ದಂಗಾಗಿದ್ದಾರೆ. ಎಸ್‌ಸಿಒ ಶೃಂಗಸಭೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾ ಒಗ್ಗಟ್ಟು ಪ್ರದರ್ಶಿಸಿರುವುದು, ಅಮೆರಿಕ ಅಧ್ಯಕ್ಷರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ರಷ್ಯಾದ ಕಚ್ಚಾತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಯಾವುದೇ ಒತ್ತಡಕ್ಕೆ ಮಣಿಯದಿರಲು ಭಾರತ ನಿರ್ಧಾರ ಮಾಡಿದೆ. ಭಾರತದ ಮೇಲೆ ಒತ್ತಡ ಹಾಕುವುದು ಅಸಾಧ್ಯ ಎಂದು ಮನಗಂಡಿರುವ ಟ್ರಂಪ್‌ ಆಡಳಿತ, ಕೈಲಾಗದವನು ಮೈಪರಚಿಕೊಂಡಂತೆ ಈಗ ಭಾರತದ ಬಗ್ಗೆ ಬಾಯಿಗೆ ಬಂದಂಥೆ ಮಾತನಾಡಲಾರಂಭಿಸಿದೆ. 

ಇತ್ತೀಚಿಗೆ ಭಾರತ-ರಷ್ಯಾ ಕಚ್ಚತೈಲ ಸಂಬಂಧವನ್ನು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ಸಲಹೆಗಾರ ಪೀಟರ್‌ ನವರೋ, "ಭಾರತ ಉನ್ನತ ವರ್ಗಕ್ಕೆ ಲಾಭ ಮಾಡಿಕೊಡಲು ಭಾರತದ ಜನರ ದುಡ್ಡಿನಲ್ಲಿ ರಷ್ಯಾದೊಂದಿಗೆ ವರ್ತಿಸುತ್ತಿದೆ" ಎಂದು ಆರೋಪಿಸಿದ್ದರು. ಪೀಟರ್‌ ನವರೋ ಅವರ ಬ್ರಾಹ್ಮಣ ಲಾಭಕೋರತನ ಹೇಳಿಕೆ, ಭಾರತದಲ್ಲಿ ತೀವ್ರ ಆಕ್ರೊಶಕ್ಕೆ ಗುರಿಯಾಗಿತ್ತು. ಇದೀಗ ಮತ್ತೆ ರಷ್ಯಾವು ಭಾರತಕ್ಕೆ ಉರಲ್‌ ದರ್ಜೆಯ ಕಚ್ಚಾತೈಲದ ಮೇಲೆ, ಬ್ಯಾರೆಲ್‌ಗೆ 3ರಿಂದ 4 ಡಾಲರ್ ರಿಯಾಯಿತಿ ಘೋಷಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಗಟ್ಟಿಗೊಳ್ಳುತ್ತಿರುವ ಸಂಬಂಧದ ಪ್ರತೀಕವಾಗಿದೆ.

Category
ಕರಾವಳಿ ತರಂಗಿಣಿ