image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನಿಧನರಾಗಿರುವ ನನ್ನ ತಾಯಿಯ ಬಗ್ಗೆ ಇವರು ಮಾತಾಡುತ್ತಾರೆ : ಭಾವುಕರಾದ ಪ್ರಧಾನಿ ಮೋದಿ

ನಿಧನರಾಗಿರುವ ನನ್ನ ತಾಯಿಯ ಬಗ್ಗೆ ಇವರು ಮಾತಾಡುತ್ತಾರೆ : ಭಾವುಕರಾದ ಪ್ರಧಾನಿ ಮೋದಿ

ನವದೆಹಲಿ : ನಿಧನರಾಗಿರುವ ನನ್ನ ತಾಯಿ ಹೀರಾಬೆನ್ ಮೋದಿಗೆ ಕಾಂಗ್ರೆಸ್ ಆರ್‌ಜೆಡಿ ಪ್ರತಿಭಟನಾ ವೇದಿಕೆಯಲ್ಲಿ ಅವಮಾನ ಮಾಡಿದ್ದಾರೆ. ನನ್ನ ತಾಯಿ ರಾಜಕೀಯದಲ್ಲಿ ಇದ್ದವರಲ್ಲ, ಆದರೂ ಅವರ ವಿರುದ್ಧ ಅತ್ಯಂತ ಕೀಳು ಭಾಷೆಯನ್ನು ಬಳಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ತಾಯಿ ಹೀರಾಬೆನ್ ಮೋದಿ ಕುರಿತು ಕಾಂಗ್ರೆಸ್ ಪ್ರತಿಭಟನೆಯಲ್ಲಿ ಆಡಿದ ಮಾತುಗಳು ಮೋದಿಗೆ ತೀವ್ರ ನೋವುಂಟು ಮಾಡಿದೆ. ಈ ಕುರಿತು ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಬಿಹಾರದ ದರ್ಬಾಂಗ್‌ನಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ವೋಟ್ ಅದಿಕಾರ್ ಯಾತ್ರೆ ಆಯೋಜಿಸಿತ್ತು. ಪ್ರಧಾನಿ ಮೋದಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ಆಯೋಜಿಸಿದ ಪ್ರಮುಖ ಯಾತ್ರೆ ಇದು. ಈ ಯಾತ್ರೆಯ ವೇದಿಕೆಯಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ದ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಲಾಗಿದೆ. ದರ್ಬಾಂಗ್‌ನಲ್ಲಿನ ಬೃಹತ್ ಸಮಾವೇಷದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಇವರು ಮೋಟಾರ್‌ಸೈಕಲ್ ಯಾತ್ರೆ ಆರಂಭಿಸಿದ ಬೆನ್ನಲ್ಲೇ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೋದಿ ತಾಯಿ ವಿರುದ್ದ ಕೀಳು ಪದಗಳನ್ನು ಬಳಕೆ ಮಾಡಿದ್ದ. ಈ ಕಾರ್ಯಕರ್ತನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಈ ರೀತಿ ಪದ ಬಳಕೆ, ಈ ಮಾತುಗಳು ತೀವ್ರ ನೋವು ತರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ತಾಯಿ ಹೀರಾಬೆನ್ ಮೋದಿ ನಿಧನರಾಗಿದ್ದಾರೆ. ಅವರು ಯಾವುದೇ ರಾಜಕೀಯಕ್ಕೆ ಬಂದವರಲ್ಲ. ರಾಜಕೀಯಕ್ಕೂ ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಆದರೆ ಅವರ ವಿರುದ್ಧ ಈ ರೀತಿ ಪದ ಬಳಕೆ ಮಾಡುತ್ತಿದ್ದಾರೆ. ಅವರೇನು ಮಾಡಿದರು ಎಂದು ಬಿಹಾರದ ಅಭಿವೃದ್ಧಿ ಕಾರ್ಯಕ್ರಮಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಭಾವುಕರಾಗಿ ಪ್ರಶ್ನಿಸಿದ್ದಾರೆ. ನಮಗೆ ತಾಯಿಯೇ ಜಗತ್ತು. ತಾಯಿ ಎಂದರೆ ನಮಗೆ ಆತ್ಮಗೌರವ. ಆದರೆ ಬಿಹಾರದ ಕಾಂಗ್ರೆಸ್ ಆರ್‌ಜೆಡಿ ವೇದಿಕೆಯಲ್ಲಿ ನನ್ನ ತಾಯಿ ವಿರುದ್ಧ ಬಳಕೆ ಮಾಡಿರುವ ಪದಗಳು ಊಹಿಸಲೂ ಸಾಧ್ಯವಿಲ್ಲ. ಇದು ಕೇವಲ ನನ್ನ ತಾಯಿಗೆ ಮಾಡಿದ ಅಪಮಾನವಲ್ಲ, ಇದು ದೇಶದ ಹಾಗೂ ಬಿಹಾರದ ತಾಯಿ, ಸಹೋದರಿ, ಮಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡ ತಾಯಂದರಿಗೆ ಎಷ್ಟು ನೋವಾಗುತ್ತದೆ? ಈ ನೋವು ನನ್ನ ಮನಸ್ಸು ಹೃದಯದಲ್ಲಿದೆ. ಈ ನೋವು ಬಿಹಾರದ ಜನತೆಯಲ್ಲೂ ಇದೆ ಎಂದು ಮೋದಿ ಹೇಳಿದ್ದಾರೆ. ತಾಯಿ ಬಗ್ಗೆ ಈ ರೀತಿ ಪದ ಬಳಕೆ, ಕೀಳು ಮಟ್ಟದ ಭಾಷೆ ಬಳಕೆ ಮಾಡುವ ಕಾಂಗ್ರೆಸ್ ಹಾಗೂ ಆರ್‌ಜೆಡಿಯಿಂದ ಮಹಿಳೆಯರಿಗೆ ಸುರಕ್ಷತೆಗೆ ಸಿಗಲು ಸಾಧ್ಯವೇ? ಇವರ ಸರ್ಕಾರ ಮಹಿಳೆಯರಿಗೆ ನೀಡಿದ ಗೌರವ ಇದು ಎಂದು ಮೋದಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ