image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಹಾರ ಮತಪಟ್ಟಿ ಪರಿಷ್ಕರಣೆಗೆ ಆಧಾರ್‌ ಪರಿಗಣಿಸಿ: ಸುಪ್ರೀಂ ಕೋರ್ಟ್‌

ಬಿಹಾರ ಮತಪಟ್ಟಿ ಪರಿಷ್ಕರಣೆಗೆ ಆಧಾರ್‌ ಪರಿಗಣಿಸಿ: ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್‌) ವೇಳೆ ಆಧಾರ್‌ ಅನ್ನು ವಾಸ ದಾಖಲೆ ಎಂದು ಪರಿಗಣಿಸುವಂತೆ ಚುನಾವಣ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ. ಮತದಾರರು ಸಲ್ಲಿಸಬೇಕಿರುವ 11 ದಾಖಲೆಗಳ ಪಟ್ಟಿಯಲ್ಲಿ ಆಧಾ‌ರ್ ಸಂಖ್ಯೆಯನ್ನೂ ಸೇರಿಸುವಂತೆ ನ್ಯಾಯಪೀಠ ಆದೇಶಿಸಿದೆ. ಈ ಮೂಲಕ, ಬಿಹಾರದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದ 60 ಲಕ್ಷದಷ್ಟು ಜನರಿಗೆ ಮತ್ತೆ ಮತಪಟ್ಟಿಗೆ ಸೇರಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ.

ಆದರೆ ದಾಖಲೆ ಸಲ್ಲಿಸಲು ಆಯೋಗ ನಿಗದಿಪಡಿಸಿರುವ ಗಡುವನ್ನು ಬದಲಾವಣೆ ಮಾಡಲು ಪೀಠ ನಿರಾಕರಿಸಿದೆ. ಸೆ.1ರ ಗಡುವಿನೊಳಗೆ ನಾಗರಿಕರು ಸೂಕ್ತ ದಾಖಲೆ(ಆಧಾ‌ರ್ ಅಥವಾ ಆಯೋಗ ನಿಗದಿಪಡಿಸಿರುವ ಇತರ ದಾಖಲೆಗಳು) ಒದಗಿಸಿ, ತಮ್ಮ ಹೆಸರನ್ನು ಮತಪಟ್ಟಿಗೆ ಸೇರಿಸಿಕೊಳ್ಳಬಹುದು. ಒಂದು ವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮುಂದೆ ಬಂದರೆ, ಅಂಥ ವೇಳೆ ಆಯೋಗವೇ ಸ್ವಯಂಪ್ರೇರಿತವಾಗಿ ಗಡುವನ್ನು ವಿಸ್ತರಿಸಬಹುದು ಎಂದೂ ನ್ಯಾಯಪೀಠ ಹೇಳಿದೆ. 

ಮತಪಟ್ಟಿ. ಪರಿಷ್ಕರಣೆಯಿಂದ ನಮ್ಮ ಮತದಾರರು ಹಕ್ಕು ಚಲಾಯಿಸುವ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿರುವ ರಾಜಕೀಯ ಪಕ್ಷಗಳನ್ನು ಇದೇ ವೇಳೆ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಹೆಸರು ಅಳಿಸಿಹೋಗಿರುವ 65 ಲಕ್ಷ ಮತದಾರರಿಗೆ ನೀವೇಕೆ ನೆರವಾಗುತ್ತಿಲ್ಲ? ನಿಮ್ಮ ಬೂತ್ ಏಜೆಂಟ್‌ಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದೆ. ಜತೆಗೆ, ಇದನ್ನು ಪ್ರಶ್ನಿಸಿ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆಯೇ ವಿನಾ ಯಾವುದೇ ರಾಜಕೀಯ ಪಕ್ಷ ಅರ್ಜಿ ಸಲ್ಲಿಸಿಲ್ಲ ಏಕೆ ಎಂದೂ ಕೇಳಿದೆ. ಮತಪಟ್ಟಿ ಪರಿಷ್ಕರಣೆ ವೇಳೆ ಆಯೋಗವು ಆಧಾರ್ ಕಾರ್ಡ್ ಅನ್ನೂ ವಾಸ ದಾಖಲೆ ಎಂದು ಪರಿಗಣಿಸಬೇಕು. ಹೇಳಿದೆ.

Category
ಕರಾವಳಿ ತರಂಗಿಣಿ