image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ ಸ್ವಾತಂತ್ರ್ಯಗೊಳ್ಳುವ ಒಂದು ದಿನ ಮೊದಲು ನಡೆದ ದೇಶ ವಿಭಜನೆಯನ್ನು ದೊಡ್ಡ ದುರಂತ ಮತ್ತು ನೋವಿನ ಸಂಗತಿ - ನರೇಂದ್ರ ಮೋದಿ

ಭಾರತ ಸ್ವಾತಂತ್ರ್ಯಗೊಳ್ಳುವ ಒಂದು ದಿನ ಮೊದಲು ನಡೆದ ದೇಶ ವಿಭಜನೆಯನ್ನು ದೊಡ್ಡ ದುರಂತ ಮತ್ತು ನೋವಿನ ಸಂಗತಿ - ನರೇಂದ್ರ ಮೋದಿ

ನವದೆಹಲಿ: ಆಗಸ್ಟ್​ 14 ಅನ್ನು ಭಾರತ ವಿಭಜನೆಯ ಭಯಾನಕ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಏಕತೆ ಮತ್ತು ಸಾಮರಸ್ಯದ ಬಂಧವನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಿಸಿದ ಜನರ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದರು. ವಿಭಜನೆ ಸಂದರ್ಭದಲ್ಲಿ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುವಾಗ ಅನುಭವಿಸಿದ ನೋವು ಹೋರಾಟಗಳು ಭಾರತದ ಇತಿಹಾಸದ ದುರಂತ ಅಧ್ಯಾಯ ಎಂದು ಕರೆದಿದ್ದಾರೆ.

'ಭಾರತವು ವಿಭಜನೆಯ ಭಯಾನಕ ಸ್ಮರಣಾರ್ಥ ದಿನವನ್ನು ಆಚರಿಸುತ್ತಿದೆ. ಇದು ನಮ್ಮ ಇತಿಹಾಸದ ಆ ದುರಂತ ಅಧ್ಯಾಯದಲ್ಲಿ ಅಸಂಖ್ಯಾತ ಜನರು ಅನುಭವಿಸಿದ ಹೋರಾಟ ಮತ್ತು ನೋವನ್ನು ಸ್ಮರಿಸಿಕೊಳ್ಳುವ ದಿನವಾಗಿದೆ. ವಿಭಜನೆ ಸಮಯದಲ್ಲಿ ಎಲ್ಲವನ್ನು ತೊರೆದು, ನಷ್ಟ ಎದುರಿಸಿ, ಹೊಸದನ್ನು ಪ್ರಾರಂಭಿಸಲು ಶಕ್ತಿ ಕಂಡುಕೊಂಡ ಸಾಮರ್ಥ್ಯವನ್ನು ಗೌರವಿಸುವ ದಿನವಾಗಿದೆ' ಎಂದು ಪ್ರಧಾನಿ ಮೋದಿ ತಿಳಿಸಿದರು. ವಿಭಜನೆಯಿಂದ ಸಂತ್ರಸ್ತರಾದರು ತಮ್ಮ ಹೊಸ ಜೀವನ ಪುನರ್​ ನಿರ್ಮಾಣಕ್ಕಾಗಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದರು. ಈ ದಿನ ನಮ್ಮ ದೇಶವನ್ನು ಏಕತೆಗಾಗಿ ಸಾಮರಸ್ಯದ ಬಂಧವನ್ನು ಬಲಪಡಿಸುವ ನಿರಂತರ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದರು.

ಈ ವಿಭಜನೆಯ ಭಯಾನಕ ಸ್ಮರಣಾರ್ಥ ದಿನದಂದು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕಾಂಗ್ರೆಸ್​ ಭಾರತವನ್ನು ತುಂಡು ತುಂಡಾಗಿ ವಿಭಜಿಸಿದ್ದು ಭಾರತ ಮಾತೆಗೆ ನೋವುಂಟು ಮಾಡಿತು ಎಂದು ಕಾಂಗ್ರೆಸ್​ ಪಕ್ಷವನ್ನು ಅವರು ಟೀಕಿಸಿದ್ದಾರೆ. ದೇಶ ವಿಭಜನೆ ಮತ್ತು ಅದರ ದುರಂತದಿಂದ ಬಳಲುತ್ತಿದ್ದವರ ನೋವನ್ನು ನೆನಪಿಸಿಕೊಳ್ಳುವ ಮೂಲಕ ಸಂತಾಪ ಸೂಚಿಸುವ ದಿನ ಇದಾಗಿದೆ. ಆ ಎಲ್ಲ ಜನರಿಗೆ ನಾನು ನನ್ನ ಹೃತ್ಪೂರ್ವಕ ಗೌರವವನ್ನು ಅರ್ಪಿಸುತ್ತೇನೆ. ದೇಶವು ವಿಭಜನೆಯ ಈ ಇತಿಹಾಸ ಮತ್ತು ನೋವನ್ನು ಎಂದಿಗೂ ಮರೆಯುವುದಿಲ್ಲ. ವಿಭಜನೆಯ ಈ ಭಯಾನಕತೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಗೌರವವನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ಈ ದಿನದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವರು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೂಡ ಪೋಸ್ಟ್​ ಮಾಡಿದ್ದು, ರಾಷ್ಟ್ರ ವಿಭಜನೆಯ ನೆನಪನ್ನು ಜೀವಂತವಾಗಿರಿಸುವುದು ರಾಷ್ಟ್ರ ನಿರ್ಮಾಣದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.

Category
ಕರಾವಳಿ ತರಂಗಿಣಿ