image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಮೋದಿ ಮಾತು...

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಮೋದಿ ಮಾತು...

ನವದೆಹಲಿ : ಆಪರೇಷನ್‌ ಸಿಂಧೂರ್ ಕುರಿತ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಆರಂಭಿಸಿ, ಸಂಸತ್ತಿನ ಅಧಿವೇಶನವು "ಭಾರತದ ವಿಜಯೋತ್ಸವ" ವನ್ನು ಸೂಚಿಸುತ್ತದೆ ಎಂದು ಹೇಳಿದರು, ಮತ್ತು ಆಪರೇಷನ್ ಸಿಂಧೂರ ಸಮಯದ ಕದನ ವಿರಾಮದಲ್ಲಿ ಬೇರೆ ಯಾವುದೇ ದೇಶದ ನಾಯಕರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್‌ ಸಿಂಧೂರ್ ಕುರಿತು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸಂಸತ್ತಿನ ಅಧಿವೇಶನವನ್ನು ಪಾಕಿಸ್ತಾನದ ವಿರುದ್ಧದ ವಿಜಯದ ಆಚರಣೆ ಎಂದು ಶ್ಲಾಘಿಸಿದರು. ಇದೇ ವೇಳೆ ಅವರು ಮಾತನಾಡುತ್ತ 'ಏಪ್ರಿಲ್ 22 ರ ಪ್ರತೀಕಾರಕ್ಕೆ 22 ನಿಮಿಷಗಳಲ್ಲಿ' ಪಾಕಿಸ್ತಾನದೊಳಗಿನ ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸದನದ ಮುಂದೆ ಭಾರತದ ಪರವಾಗಿ ಮಾತನಾಡಲು ನಾನು ಇಲ್ಲಿ ನಿಂತಿದ್ದೇನೆ. ಭಾರತದ ಪರವಾಗಿ ಮಾತನಾಡಲು ಸಾಧ್ಯವಾಗದವರಿಗೆ ಕನ್ನಡಿ ತೋರಿಸಲು ನಾನು ಇಲ್ಲಿ ನಿಂತಿದ್ದೇನೆ ಅಂತ ತಿಳಿಸಿದರು. ಇನ್ನೂ ಏಪ್ರಿಲ್ 22 ರಂದು ಪಹಲ್ಲಾಮ್‌ನಲ್ಲಿ ನಡೆದ ಕ್ರೂರ ಘಟನೆ, ಭಯೋತ್ಪಾದಕರು ಅಮಾಯಕ ಜನರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಗುಂಡು ಹಾರಿಸಿದ ರೀತಿ, ಕ್ರೌರ್ಯದ ಪರಮಾವಧಿ. ಇದು ಭಾರತವನ್ನು ಹಿಂಸಾಚಾರದ ಬೆಂಕಿಗೆ ಎಸೆಯಲು ಚೆನ್ನಾಗಿ ಯೋಚಿಸಿ ಮಾಡಿದ ಪ್ರಯತ್ನವಾಗಿತ್ತು. ಇದು ಭಾರತದಲ್ಲಿ ಗಲಭೆ ಹರಡುವ ಪಿತೂರಿಯಾಗಿತ್ತು.ದೇಶವು ಒಗ್ಗಟ್ಟಿನಿಂದ ಆ ಪಿತೂರಿಯನ್ನು ವಿಫಲಗೊಳಿಸಿದ್ದಕ್ಕಾಗಿ ಇಂದು ನಾನು ದೇಶವಾಸಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದು ಭಾರತದ 'ವಿಜಯೋತ್ಸವ'ದ ಅಧಿವೇಶನ ಎಂದು ನಾನು ಹೇಳಿದ್ದೆ ಅಂಥ ಹೇಳಿದರು. ಈ ಸಂಸತ್ತಿನ ಅಧಿವೇಶನವನ್ನು ವಿಜಯೋತ್ಸವ ಎಂದು ನಾನು ಹೇಳುವಾಗ, ಅದು ಭಯೋತ್ಪಾದನೆಯ ಪ್ರಧಾನ ಕಚೇರಿಯನ್ನು ನಾಶಪಡಿಸುವುದಾಗಿದೆ ಅಂತ ತಿಳಿಸಿದರು. ರಕ್ಷಣಾ ಪಡೆಗಳಿಗೆ ಸ್ವಾತಂತ್ರ್ಯ ನೀಡಲಾಯಿತು ಅಂತ ಅವರು ಇದೇ ವೇಳೆ ತಿಳಿಸಿದರು. (ಪಾಕಿಸ್ತಾನದ) ಭಯೋತ್ಪಾದಕ ಕೇಂದ್ರ ಕಚೇರಿಯನ್ನು ನಾಶಮಾಡಿದ್ದಕ್ಕಾಗಿ ಇದು ವಿಜಯೋತ್ಸವ, ಇದು 'ಸಿಂಧೂರ'ದ ಪ್ರತಿಜ್ಞೆಯನ್ನು ಪೂರೈಸಿದ್ದಕ್ಕಾಗಿ ವಿಜಯೋತ್ಸವ ... ಇದು 140 ಕೋಟಿ ಭಾರತೀಯರ ಏಕತೆ, ಇಚ್ಛಾಶಕ್ತಿಯ ವಿಜಯೋತ್ಸವ" ಎಂದು ಅವರು ಹೇಳಿದರು. ಸಶಸ್ತ್ರ ಪಡೆಗಳಿಗೆ ಸ್ವಾತಂತ್ರ್ಯ ನೀಡಲಾಯಿತು. ಯಾವಾಗ, ಎಲ್ಲಿ ಮತ್ತು ಹೇಗೆ ಎಂಬುದನ್ನು ನಿರ್ಧರಿಸಲು ಅವರಿಗೆ ಹೇಳಲಾಯಿತು. ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ನಮಗೆ ಹೆಮ್ಮೆಯಿದೆ. ಅವರಿಗೆ ಹೇಳಲಾಯಿತು. ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ನಮಗೆ ಹೆಮ್ಮೆಯಿದೆ, ಮತ್ತು ಅದು ಎಂತಹ ಶಿಕ್ಷೆಯೆಂದರೆ ಭಯೋತ್ಪಾದಕರ ಸೂತ್ರಧಾರಿಗಳು ಇಂದಿಗೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಅಂತ ಹೇಳಿದರು. ಹಲವಾರು ವಿಷಯಗಳ ಬಗ್ಗೆ ಗಮನಸೆಳೆದರು.

Category
ಕರಾವಳಿ ತರಂಗಿಣಿ