image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಪರೇಷನ್ ಸಿಂಧೂರ್ ಐತಿಹಾಸಿಕ ಮಿಲಿಟರಿ ಕ್ರಮವಾಗಿದಗದು, ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿಯ ಪರಿಣಾಮಕಾರಿಯಾಗಿದೆ : ರಾಜನಾಥ್ ಸಿಂಗ್

ಆಪರೇಷನ್ ಸಿಂಧೂರ್ ಐತಿಹಾಸಿಕ ಮಿಲಿಟರಿ ಕ್ರಮವಾಗಿದಗದು, ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿಯ ಪರಿಣಾಮಕಾರಿಯಾಗಿದೆ : ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಸಂಘಟಿತ ದಾಳಿ ನಡೆಸಿದ್ದವು, ಈ ಕಾರ್ಯಾಚರಣೆ ಕೇವಲ 22 ನಿಮಿಷಗಳಲ್ಲಿ ಪೂರ್ಣಗೊಂಡಿತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಇಂದು ಲೋಕಸಭೆ ಅಧಿವೇಶನದಲ್ಲಿ ಆಪರೇಷನ್​ ಸಿಂಧೂರ್​ ಕುರಿತು ಮಾಹಿತಿ ನೀಡಿದ ಅವರು, ಆಪರೇಷನ್​ ಸಿಂಧೂರ್ ಕಾರ್ಯಾಚರಣೆಗೂ ಮುನ್ನ ನಮ್ಮ ಸೇನಾ ಪಡೆಗಳು ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡಿ, ಭಯೋತ್ಪಾದಕರಿಗೆ ಗರಿಷ್ಠ ಹಾನಿಯನ್ನುಂಟುಮಾಡುವ ಆಯ್ಕೆಯನ್ನು ಆರಿಸಿಕೊಂಡವು. ಆಪರೇಷನ್ ಸಿಂಧೂರ್ ಐತಿಹಾಸಿಕ ಮಿಲಿಟರಿ ಕ್ರಮ. ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿಯ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಯುದ್ಧಭೂಮಿಯಲ್ಲಿ ಶೌರ್ಯ ಪ್ರದರ್ಶಿಸಿದ ಭಾರತದ ಧೈರ್ಯಶಾಲಿ ಪುತ್ರರಿಗೆ ನಮನ. ಪಾಕಿಸ್ತಾನಕ್ಕೆ ನಮ್ಮ ನೆಲೆಗಳ ಮೇಲೆ ದಾಳಿ ಮಾಡಲು ಸಾಧ್ಯವಾಗಲಿಲ್ಲ, ನಮ್ಮ ಯಾವುದೇ ಪ್ರಮುಖ ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ. ಪಾಕಿಸ್ತಾನ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು, ಎಸ್ -400 ಮತ್ತು ಇತರ ವಾಯು ರಕ್ಷಣಾ ವ್ಯವಸ್ಥೆಗಳಿಂದ ಅದನ್ನು ಹಿಮ್ಮೆಟ್ಟಿಸಲಾಯಿತು ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಯಾವುದೋ ಒತ್ತಡದಿಂದ ಆಪರೇಷನ್ ಸಿಂಧೂರ್ ನಿಲ್ಲಿಸಲಾಗಿದೆ ಎಂದು ಹೇಳುವುದು ಆಧಾರರಹಿತ ಮತ್ತು ಸಂಪೂರ್ಣವಾಗಿ ತಪ್ಪು. ಮಿಲಿಟರಿ ಉದ್ದೇಶಗಳನ್ನು ಸಂಪೂರ್ಣವಾಗಿ ಸಾಧಿಸಿದ್ದರಿಂದ ಭಾರತ ಕಾರ್ಯಾಚರಣೆಯನ್ನು ನಿಲ್ಲಿಸಿತು ಎಂದು ತಿಳಿಸಿದರು. ತನ್ನ ಉಳುವಿಗಾಗಿ ಇತರರನ್ನು ಅವಲಂಬಿಸಿರುವ ದೇಶದೊಂದಿಗೆ (ಪಾಕಿಸ್ತಾನ) ಪೈಪೋಟಿ ನಡೆಸುವುದು ನಮ್ಮ ಗುಣಮಟ್ಟ ಕಡಿಮೆ ಮಾಡಿದಂತೆ. ನಾವು 100 ತಪ್ಪುಗಳನ್ನು ಕ್ಷಮಿಸಬಹುದು ಎಂದನ್ನು ಶ್ರೀಕೃಷ್ಣನಿಂದ ಕಲಿತಿದ್ದೇವೆ, ಆದರೆ ಧರ್ಮವನ್ನು ರಕ್ಷಿಸಲು, ನಾವು ಸುದರ್ಶನಚಕ್ರವನ್ನು ಬಳಸಲು ಬದ್ಧರಾಗಿದ್ದೇವೆ ಎಂದು ರಾಜನಾಥ್​ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು. ನಮ್ಮ ಸರ್ಕಾರ ಪಾಕಿಸ್ತಾನದೊಂದಿಗೆ ಶಾಂತಿ ಸ್ಥಾಪಿಸಲು ಹಲವು ಬಾರಿ ಪ್ರಯತ್ನಪಟ್ಟಿದೆ. ಆದರೆ ನಂತರ, 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಕೋಟ್ ವೈಮಾನಿಕ ದಾಳಿ ಮತ್ತು 2025ರ ಆಪರೇಷನ್ ಸಿಂಧೂರ್ ಮೂಲಕ, ನಾವು ಶಾಂತಿ ಸ್ಥಾಪಿಸಲು ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ನರೇಂದ್ರ ಮೋದಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.

ಯಾವುದೇ ಪರೀಕ್ಷೆಯಲ್ಲಿ ಫಲಿತಾಂಶ ಮುಖ್ಯ. ಪರೀಕ್ಷೆಯ ಸಮಯದಲ್ಲಿ ಪೆನ್ಸಿಲ್ ಮುರಿದಿದೆಯೇ ಅಥವಾ ಪೆನ್ನು ಕಳೆದುಹೋಯಿತಾ ಎಂಬುದಲ್ಲ. ಅಂತಿಮವಾಗಿ, ಫಲಿತಾಂಶಗಳು ಮುಖ್ಯ ಎಂದು ಆಪರೇಷನ್​ ಸಿಂಧೂರದ ಕುರಿತು ಪ್ರಶ್ನೆ ಎತ್ತುತ್ತಿರುವ ವಿಪಕ್ಷ ನಾಯಕರಿಗೆ ರಾಜನಾಥ್ ಸಿಂಗ್ ಟಾಂಗ್​ ಕೊಟ್ಟರು. ವಿರೋಧ ಪಕ್ಷಗಳು ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆಯೇ ಎಂದು ಕೇಳಬೇಕು?, ಅದಕ್ಕೆ ಉತ್ತರ ಹೌದು. ನಮ್ಮ ಧೈರ್ಯಶಾಲಿ ಸೈನಿಕರು ಹಾನಿಗೊಳಗಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲ, ನಮ್ಮ ಯಾವ ಸೈನಿಕನಿಗೂ ಹಾನಿಯಾಗಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಆಪರೇಷನ್​ ಸಿಂಧೂರದಲ್ಲಿ ನಮ್ಮ ಎಷ್ಟು ಯುದ್ಧ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ವಿರೋಧ ಪಕ್ಷದ ಕೆಲವೇ ಸದಸ್ಯರು ಕೇಳುತ್ತಿದ್ದಾರೆ?, ಅವರ ಪ್ರಶ್ನೆ ನಮ್ಮ ರಾಷ್ಟ್ರೀಯ ಭಾವನೆಗಳನ್ನು ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಸಶಸ್ತ್ರ ಪಡೆಗಳು ಎಷ್ಟು ಶತ್ರು ವಿಮಾನಗಳನ್ನು ಹೊಡೆದುರುಳಿಸಿದವು ಎಂದು ಅವರು ನಮ್ಮನ್ನು ಕೇಳಿಲ್ಲ. ಭಾರತ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆಯೇ ಎಂಬುದು ಅವರ ಪ್ರಶ್ನೆಯಾಗಿರಬೇಕು ಮತ್ತು ಅದಕ್ಕೆ ಉತ್ತರ, ಹೌದು. ನೀವು ಕೇಳಬೇಕಾದ ಪ್ರಶ್ನೆಯಿದ್ದರೆ, ಇದನ್ನು ಕೇಳಿ ಎಂದರು. ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸಲು ಈ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಪಾಕಿಸ್ತಾನ ಗಡಿ ದಾಟುವುದು ಅಥವಾ ಅವರ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಆಪರೇಷನ್ ಸಿಂಧೂರದ ಉದ್ದೇಶವಾಗಿರಲಿಲ್ಲ. ಆಪರೇಷನ್ ಸಿಂಧೂರದ ಗುರಿಯು ಪಾಕಿಸ್ತಾನವು ಹಲವು ವರ್ಷಗಳಿಂದ ಪೋಷಿಸುತ್ತಿದ್ದ ಭಯೋತ್ಪಾದಕ ನರ್ಸರಿಗಳನ್ನು ನಿರ್ಮೂಲನೆ ಮಾಡುವುದಾಗಿತ್ತು ಮತ್ತು ಅದಕ್ಕಾಗಿ ನಮ್ಮ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಯಿತು. ಯುದ್ಧವನ್ನು ಪ್ರಾರಂಭಿಸುವುದು ಗುರಿಯಾಗಿರಲಿಲ್ಲ, ಆದರೆ ಎದುರಾಳಿ ತಲೆಬಾಗುವಂತೆ ಮಾಡುವುದು ಗುರಿಯಾಗಿತ್ತು ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ