image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮ್ಯಾನ್ಮಾರ್​ ಮೂಲದ ಬಂಡುಕೋರರ ಕ್ಯಾಂಪ್​ ಮೇಲೆ ಡ್ರೋನ್​ ಮತ್ತು ಕ್ಷಿಪಣಿ ದಾಳಿ

ಮ್ಯಾನ್ಮಾರ್​ ಮೂಲದ ಬಂಡುಕೋರರ ಕ್ಯಾಂಪ್​ ಮೇಲೆ ಡ್ರೋನ್​ ಮತ್ತು ಕ್ಷಿಪಣಿ ದಾಳಿ

ಅಸ್ಸೋಂ : ಮಹತ್ತರ ಬೆಳವಣಿಗೆಯೊಂದರಲ್ಲಿ ಅಸ್ಸೋಂನ ಉಗ್ರ ಸಂಘಟನೆ ಉಲ್ಫಾ ಐ ಸಂಘಟನೆಯ ಕೆಲವರು ಸೇರಿದಂತೆ ಮ್ಯಾನ್ಮಾರ್​ ಮೂಲದ ಬಂಡುಕೋರರ ಕ್ಯಾಂಪ್​ ಮೇಲೆ ದ್ರೋನ್​ ಮತ್ತು ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಭಾರತೀಯ ಸೇನೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಕೂಡ ಅಸ್ಸೋಂ ರಾಜ್ಯದಿಂದ ಈ ದಾಳಿ ನಡೆದಿಲ್ಲವೆಂದು ಹೇಳಿದ್ದಾರೆ. ಆದ್ರೆ ಉಲ್ಫಾ ಸ್ವತಂತ್ರ ಉಗ್ರ ಸಂಘಟನೆ ಮಾತ್ರ ಭಾರತೀಯ ಸೇನೆಯಿಂದ ಈ ನಡೆಸಲಾಗಿದೆ ಎಂದು ಆರೋಪಿಸಿದೆ.

ಈ ದ್ರೋನ್​ ದಾಳಿ ಭಾನುವಾರ ಬೆಳಗಿನಜಾವ (ಜುಲೈ 13) ಇಂಡಿಯಾ-ನಾಗಾಲ್ಯಾಂಡ್​-ಮ್ಯಾನ್ಮಾರ್​ ಅಂತಾರಾಷ್ಟ್ರೀಯ ಗಡಿಯ ಬಳಿಯ ಪಾಂಗಸೌ ಪಾಸ್​ ಮ್ಯಾನ್ಮಾರ್​ ಗಡಿಯಲ್ಲಿ ನಡೆದಿದೆ. ಉಲ್ಫಾ -I ಮತ್ತು RPF/PLA ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಇದರಿಂದ ಬಂಡುಕೋರ ಸಂಘಟನೆಗಳ ಉನ್ನತ ಶ್ರೇಣಿಯಲ್ಲಿದ್ದ ಲೆಫ್ಟಿನೆಂಟ್​ ಜನರಲ್​ ರ್ಯಾಂಕ್​ ನಯಾನ್​ಅಸೊಮ್, ಗಣೇಶ್ ಅಸೊಮ್​, ಮತ್ತು ಪ್ರದೀಪ್​ ಅಸೊಮ್ ಹತ್ಯೆಗೀಡಾಗಿದ್ದಾರೆ. ಅಲ್ಲದೆ, ಹಲವು ಸಂಘಟನೆಗಳ ಸದಸ್ಯರು ಗಾಯೊಂಡಿರುವ ಬಗ್ಗೆ ವರದಿಯಾಗಿದೆ.

ಉಲ್ಫಾ ಐ ಉಗ್ರ ಸಂಘಟನೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಭಾನುವಾರ ನಡೆದ ಈ ದಾಳಿಯಲ್ಲಿ ತಮ್ಮ ಸಂಘಟನೆಯ ಮೂವರು ಸದಸ್ಯರು ಹತರಾಗಿರುವ ಬಗ್ಗೆ ತಿಳಿಸಿದೆ. ಎರಡನೇ ಲೆಫ್ಟಿನೆಂಟ್​ ಕಮಾಂಡರ್​ ಇಶಾನ್ ಅಸೊಮ್, ಉಲ್ಫಾ ಸಂಘಟನೆ ಸಹಾಯಕ ಕಾರ್ಯದರ್ಶಿಯ​ ಮಾಧ್ಯಮ ಪ್ರಕಟಣೆ ಪ್ರಕಾರ, ಭಾರತೀಯ ಸೇನೆಯೇ ಈ ದಾಳಿ ನಡೆಸಿದೆ ಎಂದು ದೂರಿದ್ದಾರೆ. '' ಜುಲೈ 13, 2025 ರಂದು ನಸುಕಿನಜಾವ 2 ಗಂಟೆಯಿದ 4 ಗಂಟೆಯ ಮಧ್ಯೆ ಭಾರತೀಯ ಸೇನೆ ಅಚ್ಚರಿ ನೀಡುವ ಸಲುವಾಗಿ ಇಸ್ರೇಲ್ ಮತ್ತು ಫ್ರಾನ್ಸ್ ನಿರ್ಮಿತ ದ್ರೋನ್​ಗಳಿಂದ ಉನೈಟೆಡ್​ ಲಿಬರೇಷನ್​ ಫ್ರಂಟ್​ ಅಸ್ಸೋಂ (ಸ್ವತಂತ್ರ) ಮತ್ತು ಆರ್​ಪಿಎಫ್ /ಪಿಎಲ್​ಎ ನಾಗಾಲ್ಯಾಂಡ್​ -ಮ್ಯಾನ್ಮಾರ್​ ಅಂತಾರಾಷ್ಟ್ರೀಯ ಗಡಿಯಿಂದ ಲೊಂಗವಾ ಕಡೆಯಿಂದ ಅರುಣಾಚಲ-ಮ್ಯಾನ್ಮಾರ್​ ಬಳಿಯ ಪಾಂಗಸೌ ಪಾಸ್​ ಬಳಿ ನಡೆದಿದೆ.

ULFA-I ಹೇಳಿರುವ ಪ್ರಕಾರ, 150ಕ್ಕೂ ಹೆಚ್ಚು ದ್ರೋನ್​ಗಳ ಮೂಲಕ ಬಾಂಬ್ ದಾಳಿ ತಮ್ಮ ಕ್ಯಾಂಪ್​ಗಳ ಮೇಲೆ ನಡೆದಿದೆ. ಈ ವೇಳೆ ಲೆಫ್ಟಿನೆಂಟ್​ ಜನರಲ್​ ನಯಾನ್ ​ಅಸೊಮ್​, ಸಂಘಟನೆಯ ಲೋವರ್​ ಕೌನ್ಸಿಲ್ ಅಧ್ಯಕ್ಷ ಹತನಾಗಿದ್ದರೆ, ಉಳಿದಂತೆ 19 ಅಧಿಕಾರಿಗಳು ಅಥವಾ ಸದಸ್ಯರು ಗಾಯಗೊಂಡಿದ್ದಾರೆ. 1990 ರಲ್ಲೇ ಭಾರತದಿಂದ ನಿಷೇಧಕ್ಕೊಳಗಾಗಿರುವ ಉಲ್ಫಾ ಸಂಘಟನೆಯನ್ನು​ ನಯಾನ್​ ಅಸೊಮ್​ ಸೇರಿದ್ದ.

ಈ ದಾಳಿಗೆ ಸಂಬಂಧಿಸಿದಂತೆ ಎರಡನೇ ಪ್ರಕಟಣೆ ಹೊರಡಿಸಿರುವ ಉಲ್ಫಾ ಐ, "ಹತನಾದ ತಮ್ಮ ಸಂಘಟನೆಯ ಲೆಫ್ಟಿನೆಂಟ್​ ಜನರಲ್​ ನಯಾನ್​​ ಅಸೊಮ್ ಅಂತ್ಯಕ್ರಿಯೆ ನಡೆಯುವಾಗ ​ಮತ್ತೊಂದು ಬಾರಿ ಕ್ಷಿಪಣಿ ದಾಳಿ ನಡೆಯಿತು. ಈ ವೇಳೆ ಬ್ರಿಗೇಡಿಯರ್​ ಗಣೇಶ್ ಅಸೊಮ್​, ಕರ್ನಲ್​ ಪ್ರದೀಪ್ ಅಸೊಮ್​ ಹತರಾದರು. ಅಲ್ಲದೆ, ಕೆಲ ಸದಸ್ಯರು ಮತ್ತು ಸಾಮಾನ್ಯ ನಾಗರಿಕರು ಗಾಯಗೊಂಡಿದ್ದಾರೆ. ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ" ಎಂದಿದ್ದಾರೆ.

Category
ಕರಾವಳಿ ತರಂಗಿಣಿ