image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಚಾರ್‌ಧಾಮ್ ಹೆಲಿಕಾಪ್ಟರ್ ಬುಕಿಂಗ್‌ ನ 51 ನಕಲಿ ವೆಬ್‌ಸೈಟ್‌ಗಳು ಬ್ಲಾಕ್

ಚಾರ್‌ಧಾಮ್ ಹೆಲಿಕಾಪ್ಟರ್ ಬುಕಿಂಗ್‌ ನ 51 ನಕಲಿ ವೆಬ್‌ಸೈಟ್‌ಗಳು ಬ್ಲಾಕ್

ಉತ್ತರಾಖಂಡ್ : ಹೆಲಿಕಾಪ್ಟರ್‌ನಲ್ಲಿ ಚಾರ್‌ಧಾಮ್ ಯಾತ್ರೆ ಮಾಡಿಸುವ ನೆಪದಲ್ಲಿ ಭಕ್ತರನ್ನು ವಂಚಿಸುತ್ತಿದ್ದ ಸೈಬರ್​ ಖದೀಮರ ಕೃತ್ಯಗಳಿಗೆ ಕಡಿವಾಣ ಹಾಕುತ್ತಲೇ ಬಂದಿರುವ ಉತ್ತರಾಖಂಡ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಈ ಬಾರಿ ಚಾರ್‌ಧಾಮ್ ಯಾತ್ರೆ ಆರಂಭವಾದ ದಿನದಿಂದ ಹಿಡಿದು ಇಂದಿನವರೆಗೆ 51 ನಕಲಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ.

ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್‌, ಬದರಿನಾಥ್‌ ದೇವಾಲಯಗಳ ವೀಕ್ಷಣೆ ಬಯಸುವ ಭಕ್ತರು ಹೆಲಿಕಾಪ್ಟರ್‌ ಸೇವೆಗಾಗಿ ಆನ್‌ಲೈನ್‌ನಲ್ಲಿ ಬುಕ್‌ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು, ಹೆಲಿಕಾಪ್ಟರ್‌ ಸೇವೆಗಳ ನೆಪದಲ್ಲಿ, ನಕಲಿ ವೆಬ್‌ಸೈಟ್‌ ಮತ್ತು ಜಾಹೀರಾತುಗಳ ಮೂಲಕ ಭಕ್ತರನ್ನು ವಂಚಿಸುತ್ತಿದ್ದರು.

2023ರಿಂದ ಹಲವು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುತ್ತಿರುವ ಎಸ್‌ಟಿಎಫ್, 2023ರಲ್ಲಿ 64 ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸಿ ನಿರ್ಬಂಧಿಸಿತ್ತು. 2024ರಲ್ಲಿ 18 ನಕಲಿ ವೆಬ್‌ಸೈಟ್‌ಗಳು, 45 ಫೇಸ್‌ಬುಕ್ ಪುಟಗಳು ಮತ್ತು 20 ಬ್ಯಾಂಕ್ ಖಾತೆಗಳನ್ನು ಗುರುತಿಸಿ ನಿರ್ಬಂಧಿಸಿತ್ತು. ಈ ವರ್ಷ (2025) 51 ನಕಲಿ ವೆಬ್‌ಸೈಟ್‌ಗಳ ನಿರ್ಬಂಧನ ಜೊತೆಗೆ ವಂಚನೆಯಲ್ಲಿ ಬಳಸಲಾಗುತ್ತಿದ್ದ 111 ಮೊಬೈಲ್ ಸಂಖ್ಯೆ, 56 ಬ್ಯಾಂಕ್ ಖಾತೆ, 30 ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ವರದಿ ಮಾಡಿ ನಿರ್ಬಂಧಿಸಲಾಗಿದೆ.

ಗೃಹ ಸಚಿವಾಲಯದ (MHA) ಅಡಿಯಲ್ಲಿ I4C (Indian Cyber Crime Coordination Centre) ಅಭಿಯಾನ ಕೈಗೊಳ್ಳಲಾಗಿದೆ. ಮೆಟಾ (Meta)ದಲ್ಲಿ ನಕಲಿ ಹೆಲಿಕಾಪ್ಟರ್ ಬುಕಿಂಗ್‌ಗೆ ಸಂಬಂಧಿಸಿದ ಹೊಸ ಪುಟ ಮತ್ತು ಜಾಹೀರಾತುಗಳನ್ನು ನಿಲ್ಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಐಜಿ ಧೀರೇಂದ್ರ ಗುಂಜ್ಯಾಲ್ ಹೇಳಿದ್ದಾರೆ.

ಸೈಬರ್ ಅಪರಾಧಿಗಳು ಈಗ ವೆಬ್‌ಸೈಟ್‌ಗಳ ಬದಲಿಗೆ ಫೇಸ್‌ಬುಕ್‌ನಲ್ಲಿ ನಕಲಿ ಪುಟಗಳನ್ನು ರಚಿಸಿ ಮತ್ತು ಜಾಹೀರಾತುಗಳನ್ನು ಹೆಚ್ಚಿಸುವ ಮೂಲಕ ಜನರನ್ನು ಮೋಸಗೊಳಿಸಲು ಪ್ರಾರಂಭಿಸಿದ್ದಾರೆ. ಈ ಪವಿತ್ರ ಪ್ರಯಾಣವನ್ನು ಸಂಪೂರ್ಣವಾಗಿ ಸುರಕ್ಷಿತ, ಸುಗಮ ಮತ್ತು ವಂಚನೆ ಮುಕ್ತವಾಗಿಸುವುದು ಉತ್ತರಾಖಂಡ ಪೊಲೀಸರ ಪ್ರಯತ್ನವಾಗಿದೆ. ಜನಜಾಗೃತಿಯೇ ನಮ್ಮ ದೊಡ್ಡ ಶಕ್ತಿ ಎಂದು ಎಸ್‌ಎಸ್‌ಪಿ ಎಸ್‌ಟಿಎಫ್ ನವನೀತ್ ಸಿಂಗ್ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ