image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮಮಂದಿರದ ನಿರ್ಮಾಣ ಕಾರ್ಯ ಜೂನ್​​ನಲ್ಲಿ ಮುಗಿಯುವ ನಿರೀಕ್ಷೆ : ಡಾ. ಅನಿಲ್​ ಮಿಶ್ರಾ

ರಾಮಮಂದಿರದ ನಿರ್ಮಾಣ ಕಾರ್ಯ ಜೂನ್​​ನಲ್ಲಿ ಮುಗಿಯುವ ನಿರೀಕ್ಷೆ : ಡಾ. ಅನಿಲ್​ ಮಿಶ್ರಾ

ಉತ್ತರಪ್ರದೇಶ : ಭವ್ಯ ರಾಮಮಂದಿರದ ಬಾಕಿ ಉಳಿದ ನಿರ್ಮಾಣ ಕಾರ್ಯಗಳು ಮುಕ್ತಾಯ ಹಂತ ತಲುಪಿವೆ. 161 ಅಡಿ ಎತ್ತರದ ಗೋಪುರ ಶಿಖರ ನಿರ್ಮಿತಿಯು ಜೂನ್​ ವೇಳೆಗೆ ಮುಗಿಯಲಿದ್ದು, ಈ ಮೂಲಕ ಮಂದಿರದ ಎಲ್ಲ ನಿರ್ಮಾಣ ಯೋಜನೆಗಳು ಸಂಪನ್ನವಾಗಲಿವೆ ಎಂದು ರಾಮಮಂದಿರ ಟ್ರಸ್ಟ್​​ನ ಸದಸ್ಯ ಡಾ. ಅನಿಲ್​ ಮಿಶ್ರಾ ಅವರು ತಿಳಿಸಿದರು.

ವಿಶ್ವವಿಖ್ಯಾತ ಪಡೆದಿರುವ ರಾಮಮಂದಿರದ ಅಳಿದುಳಿದ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ಮುಖ್ಯಮಂದಿರದ ಶಿಖರ ಸೇರಿದಂತೆ ದೇವಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ವಿವಿಧ ಪುಣ್ಯ ಪುರುಷರ ವಿಗ್ರಹಗಳ ಕೆತ್ತನೆಯೂ ಮುಗಿದಿದೆ. ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ ಎಂದರು.

ಪ್ರಯಾಗ್​ರಾಜ್​​ನಲ್ಲಿ ನಡೆದ ಸನಾತನಿಗಳ ಬೃಹತ್​ ಧಾರ್ಮಿಕ ಉತ್ಸವ ಮಹಾ ಕುಂಭಮೇಳದಿಂದಾಗಿ ರಾಮಮಂದಿರ ನಿರ್ಮಾಣ ಕಾರ್ಯವು ತುಸು ವಿಳಂಬವಾಯಿತು. ಭಕ್ತಸಾಗರದ ಭೇಟಿಯಿಂದಾಗಿ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಸಾಗಣೆ ನಿಧಾನವಾಗಿತ್ತು. ಭಕ್ತರಿಗೆ ಸಮಸ್ಯೆ ಉಂಟಾಗದಿರಲು ಪರಿಕರಗಳನ್ನು ರಾತ್ರಿ ವೇಳೆ ಸಾಗಿಸಲಾಗುತ್ತಿದೆ ಎಂದು ಹೇಳಿದರು.

ನಿರ್ಮಾಣ ಪ್ರಗತಿಗೆ ಯಾವುದೇ ದೊಡ್ಡ ಅಡೆತಡೆಗಳಿಲ್ಲ. ಯಾತ್ರಿಕರ ನಿರ್ಗಮನ ಮಾರ್ಗಗಳ ಕೆಲಸ ಸ್ವಲ್ಪ ನಿಧಾನವಾಗಿದ್ದರೂ, ಯೋಜನೆಯ ಎಲ್ಲಾ ಇತರ ನಿರ್ಮಾಣಗಳು ವೇಳಾಪಟ್ಟಿಯಂತೆ ಸಾಗಿವೆ ಎಂದು ಡಾ. ಮಿಶ್ರಾ ಮಾಹಿತಿ ನೀಡಿದರು.

ಸಪ್ತಮಂಟಪದ (ಏಳು ಮಂಟಪಗಳು) ಶಿಖರಗಳು ಬಹುತೇಕ ಪೂರ್ಣಗೊಂಡಿವೆ. ಶೇಷಾವತಾರ ದೇವಾಲಯ ನಿರ್ಮಾಣವೂ ವೇಗ ಪಡೆದಿದೆ. ಮಂದಿರ ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಆರು ದೇವಾಲಯಗಳ ಎರಡು ಶಿಖರಗಳು ಪೂರ್ಣಗೊಂಡಿವೆ. ಉಳಿದವು ಏಪ್ರಿಲ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

Category
ಕರಾವಳಿ ತರಂಗಿಣಿ