image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ರಾಜನಾಥ್ ಸಿಂಗ್ ಕರೆ

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ರಾಜನಾಥ್ ಸಿಂಗ್ ಕರೆ

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ಅಥವಾ ತಾರತಮ್ಯದ ನೀತಿಗೆ ಅವಕಾಶ ನೀಡಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಉಗ್ರರಿಗೆ ಹಣಕಾಸು ನೆರವು ನೀಡುವ, ಅವರಿಗೆ ಬೆಂಬಲ ವ್ಯಕ್ತಪಡಿಸುವ ಹಾಗೂ ಆಶ್ರಯ ಕಲ್ಪಿಸುವ ಎಲ್ಲಾ ಜಾಲಗಳನ್ನು ಜಾಗತಿಕ ರಾಷ್ಟ್ರಗಳು ಒಗ್ಗಟ್ಟಿನಿಂದ ಧ್ವಂಸಗೊಳಿಸಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ಮಾತನಾಡಿದ ಅವರು, ಉಗ್ರವಾದವನ್ನು ಎದುರಿಸುವಾಗ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಆಯ್ದುಕೊಂಡ ನಿಲುವು ಅನುಸರಿಸಬಾರದು. ಬದಲಿಗೆ ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆ ಮತ್ತು ಜಾಲದ ವಿರುದ್ಧ ಎಲ್ಲಾ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದೇ ಎಸ್‌ಸಿಒ ಸಭೆಯ ನಡುವೆ ರಾಜನಾಥ್ ಸಿಂಗ್ ಅವರು ತಜಿಕಿಸ್ತಾನದ ಪ್ರಧಾನಿ ಕೊಹಿರ್ ರಸೂಲ್ಜೋಡಾ ಮತ್ತು ಇರಾನ್‌ನ ಪ್ರಥಮ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಿಫ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತ ಮತ್ತು ತಜಿಕಿಸ್ತಾನ ನಡುವಿನ ಐತಿಹಾಸಿಕ ಸಂಬಂಧ ಹಾಗೂ ಉಭಯ ದೇಶಗಳ ಜನರ ನಡುವಿನ ಸೌಹಾರ್ದ ಸಂಪರ್ಕಗಳ ಮಹತ್ವವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.

Category
ಕರಾವಳಿ ತರಂಗಿಣಿ