image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಜೆಐ ರಾಜೀನಾಮೆಗೆ ಆಗ್ರಹಿಸಿ ಪೋಸ್ಟ್ ಹಾಕಿ ಸಿಕ್ಕಿಬಿದ್ದ ಕಾಂಗ್ರೆಸ್

ಸಿಜೆಐ ರಾಜೀನಾಮೆಗೆ ಆಗ್ರಹಿಸಿ ಪೋಸ್ಟ್ ಹಾಕಿ ಸಿಕ್ಕಿಬಿದ್ದ ಕಾಂಗ್ರೆಸ್

ನವದೆಹಲಿ : ದೆಹಲಿ ಪ್ರತಿಭಟನೆ ಹಾಗೂ ಕಾನೂನು ಸುವ್ಯವಸ್ಥೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯನ್ನು ತಿರುಚಿ, ಅವರ ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿತ್ತು.

"ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ರಾಜೀನಾಮೆ ನೀಡಿ, ಬೇರೆ ವ್ಯಕ್ತಿಯನ್ನು ನಾವು ಹುಡುಕುತ್ತೇವೆ" ಎಂದು ಉಲ್ಲೇಖಿಸಿ ಮಾಡಿದ್ದ ಈ ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಯಿತು. ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಹಾಗೂ ಹಿರಿಯ ನಾಯಕರಿಂದಲೇ ವಿರೋಧ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್, ಕೂಡಲೇ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿತು.

ಆದರೆ, ಈ ಪ್ರಮಾದದಿಂದಾಗಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ನ್ಯಾಯಾಂಗದ ವಿರುದ್ಧ ಕಾಂಗ್ರೆಸ್ ನೇರ ವಾಗ್ದಾಳಿ ನಡೆಸುತ್ತಿದೆ ಎಂಬ ಬಿಜೆಪಿ ಮತ್ತು ಕೇಂದ್ರ ಸಚಿವರ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದ್ದು, ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಮುಖಭಂಗವಾಗಿದೆ.

Category
ಕರಾವಳಿ ತರಂಗಿಣಿ