image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಡಬ್ಲ್ಯೂಸಿ ಸಭೆಯಲ್ಲಿ ತರೂರ್ ಕಾಲೆಳೆದ ಖರ್ಗೆ: 'ಎಕ್ಸ್' ಹಾಗೂ ಲೇಖನಕ್ಕೆ ಮಾತ್ರ ಸೀಮಿತವೇ ಎಂದ ಕಾಂಗ್ರೆಸ್ ಅಧ್ಯಕ್ಷ

ಸಿಡಬ್ಲ್ಯೂಸಿ ಸಭೆಯಲ್ಲಿ ತರೂರ್ ಕಾಲೆಳೆದ ಖರ್ಗೆ: 'ಎಕ್ಸ್' ಹಾಗೂ ಲೇಖನಕ್ಕೆ ಮಾತ್ರ ಸೀಮಿತವೇ ಎಂದ ಕಾಂಗ್ರೆಸ್ ಅಧ್ಯಕ್ಷ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಸಂಸದ ಶಶಿ ತರೂರ್ ನೀಡಿದ ಸಲಹೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹಾಸ್ಯಮಯ ಪ್ರತಿಕ್ರಿಯೆ ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದೆ. ಮಹಾತ್ಮ ಗಾಂಧಿಯವರ ಜನ್ಮದಿನದಂದು ಕಾಂಗ್ರೆಸ್ ಪಕ್ಷವು ಬೃಹತ್ ಕಾರ್ಯಕ್ರಮ ಆಯೋಜಿಸಿ ತನ್ನದೇ ರಾಜಕೀಯ ಸಂದೇಶವನ್ನು ಜನರಿಗೆ ತಲುಪಿಸಬೇಕು, ಇಲ್ಲದಿದ್ದರೆ ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡು ತನ್ನದೇ ನಿರೂಪಣೆ ರೂಪಿಸಲಿದೆ ಎಂದು ತರೂರ್ ಸಲಹೆ ನೀಡಿದ್ದರು. ಈ ಸಲಹೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಖರ್ಗೆ, "ಪಕ್ಷ ಇಂತಹ ಕಾರ್ಯಕ್ರಮ ಆಯೋಜಿಸಿದರೆ ಡಾ. ತರೂರ್ ನಿಜವಾಗಿಯೂ ಅದರಲ್ಲಿ ಭಾಗವಹಿಸುತ್ತಾರೆಯೇ? ಅಥವಾ ಅವರನ್ನು ಕೇವಲ 'ಎಕ್ಸ್' (ಟ್ವಿಟರ್) ಹಾಗೂ ಪತ್ರಿಕೆಗಳ ಲೇಖನಗಳಲ್ಲಷ್ಟೇ ನೋಡಬೇಕಾಗುತ್ತದೆಯೇ?" ಎಂದು ಹಾಸ್ಯವಾಗಿ ಚುಚ್ಚಿದರು. ಖರ್ಗೆ ಅವರ ಈ ಮಾತಿಗೆ ಸಭೆಯಲ್ಲಿದ್ದ ಹಲವು ನಾಯಕರು ನಕ್ಕರು.

ಶಶಿ ತರೂರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದನ್ನು ಹಾಗೂ ಮಾಧ್ಯಮ ಲೇಖನಗಳನ್ನಷ್ಟೇ ಬರೆಯುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಖರ್ಗೆ ಈ ಮಾತುಗಳನ್ನಾಡಿದ್ದಾರೆ. ಈ ಹಿಂದೆಯೂ ಹಲ್ದ್ವಾನಿಯ ‘ಶುದ್ಧೀಕರಣ’ ವಿವಾದದ ಸಂದರ್ಭದಲ್ಲಿ, ಟಿವಿಯಲ್ಲಿ ಪ್ರಸಿದ್ಧರಾಗಿರುವ ಹಾಗೂ ಲೇಖನ ಬರೆಯುವ ನಾಯಕರು ನೆಲದ ಮೇಲಿನ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಸಭೆಯಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟದ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದ್ದು, ನಾಯಕರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ