image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ!

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ!

ನವದೆಹಲಿ : 2022ರಿಂದ 2026ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 111 ಹಾಲಿ ಸಂಸದರು ಮತ್ತು ಶಾಸಕರು ಪಕ್ಷ ಬದಲಾಯಿಸಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಶನಲ್ ಎಲೆಕ್ಷನ್ ವಾಚ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಈ ಪೈಕಿ 26 ಲೋಕಸಭಾ ಸಂಸದರು, 7 ರಾಜ್ಯಸಭಾ ಸಂಸದರು ಹಾಗೂ 78 ಶಾಸಕರು ಸೇರಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪಕ್ಷಾಂತರಗೊಂಡ ನಾಯಕರನ್ನು ಸೇರಿಸಿಕೊಳ್ಳುವಲ್ಲಿ ನಾಗಾ ಪೀಪಲ್ಸ್ ಫ್ರಂಟ್ (NPF) ಮೊದಲ ಸ್ಥಾನದಲ್ಲಿದ್ದು, ಒಟ್ಟು 32 ಸಂಸದರು ಹಾಗೂ ಶಾಸಕರು (ಶೇ. 29) ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಟ್ಟು 29 ನಾಯಕರನ್ನು (ಶೇ. 26) ತಮ್ಮತ್ತ ಸೆಳೆದುಕೊಂಡಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎರಡನೇ ಸ್ಥಾನದಲ್ಲಿದ್ದರೆ, 20 ಹಾಲಿ ಸಂಸದರು ಮತ್ತು ಶಾಸಕರನ್ನು ಸೇರಿಸಿಕೊಂಡ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಮೂರನೇ ಸ್ಥಾನದಲ್ಲಿದೆ.

ಬಿಜೆಪಿ ಸೇರಿಕೊಂಡ 29 ನಾಯಕರಲ್ಲಿ 7 ರಾಜ್ಯಸಭಾ ಸಂಸದರು ಹಾಗೂ 22 ಶಾಸಕರಿದ್ದು, ಲೋಕಸಭೆಯ ಯಾವುದೇ ಹಾಲಿ ಸಂಸದರು ಬಿಜೆಪಿ ಸೇರಿಲ್ಲ. ರಾಜ್ಯಸಭೆಯಿಂದ ಆಮ್ ಆದ್ಮಿ ಪಾರ್ಟಿಯಿಂದ ಆಯ್ಕೆಯಾಗಿದ್ದ ರಾಘವ್ ಚಡ್ಡಾ, ಸ್ವಾತಿ ಮಲಿವಾಲ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ವಿಕ್ರಮಜಿತ್ ಸಿಂಗ್ ಸಹನೆ ಮತ್ತು ರಾಜೀಂದರ್ ಗುಪ್ತ ಬಿಜೆಪಿ ಸೇರಿದ್ದಾರೆ. ಶಾಸಕರ ಪೈಕಿ ಗೋವಾ ಕಾಂಗ್ರೆಸ್‌ನಿಂದ 8, ಮಣಿಪುರದ ಜೆಡಿಯುನಿಂದ 5, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಕಾಂಗ್ರೆಸ್‌ನಿಂದ ತಲಾ ಇಬ್ಬರು ಶಾಸಕರು ಬಿಜೆಪಿಗೆ ಸೇರಿದ್ದಾರೆ. ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ಧನ ರೆಡ್ಡಿ ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ