image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೃಹತ್ ಮಾದಕವಸ್ತು ಸಾಗಾಟ ಜಾಲ ಪತ್ತೆ; ₹1.05 ಕೋಟಿ ಮೌಲ್ಯದ ಎಂಡಿಎಂಎ ಮತ್ತು ಕೊಕೈನ್ ವಶಕ್ಕೆ, ಓರ್ವ ಆರೋಪಿ ಬಂಧನ

ಬೃಹತ್ ಮಾದಕವಸ್ತು ಸಾಗಾಟ ಜಾಲ ಪತ್ತೆ; ₹1.05 ಕೋಟಿ ಮೌಲ್ಯದ ಎಂಡಿಎಂಎ ಮತ್ತು ಕೊಕೈನ್ ವಶಕ್ಕೆ, ಓರ್ವ ಆರೋಪಿ ಬಂಧನ

ಬಂಟ್ವಾಳ: ಹಾಸನ ಕಡೆಯಿಂದ ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಮಾದಕವಸ್ತುವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಒಟ್ಟು ₹1,05,59,450/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 16.08.2026 ರಂದು ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಮಂಜುನಾಥ ಟಿ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಅವರ ಸಿಬ್ಬಂದಿಗಳು ತಡರಾತ್ರಿ KA-01-MA-1284 ನೋಂದಣಿ ಸಂಖ್ಯೆಯ ಕಾರನ್ನು ತಡೆದು ತಪಾಸಣೆ ನಡೆಸಿದರು. ವಾಹನ ಚಾಲಕನಾಗಿದ್ದ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನನ್ನು ವಿಚಾರಣೆ ನಡೆಸಿದಾಗ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕಾರನ್ನು ಪರಿಶೀಲಿಸಿದಾಗ 538.63 ಗ್ರಾಂ ಎಂಡಿಎಂಎ (MDMA), 99.12 ಗ್ರಾಂ ಕೊಕೈನ್, ಹಾಗೂ ಕೃತ್ಯಕ್ಕೆ ಬಳಸಿದ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು ಮತ್ತು ಡಿಜಿಟಲ್ ತೂಕದ ಯಂತ್ರಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಪೈಕಿ ಎಂಡಿಎಂಎ ಬೆಲೆ ₹53,86,300/- ಹಾಗೂ ಕೊಕೈನ್ ಬೆಲೆ ₹49,56,000/- ಆಗಿದ್ದು, ಇತರೆ ಸೊತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು ಮೌಲ್ಯ ₹1,05,59,450/- ಆಗಿದೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 113/2026, ಕಲಂ: 8(C) r/w 22(C), 21(ಬಿ) NDPS ACT 1985 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

Category
ಕರಾವಳಿ ತರಂಗಿಣಿ