image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ನಾಲಗೆ ಹರಿ ಬಿಟ್ಟ ಅರಣ್ಯ ಅಧಿಕಾರಿ: ಹಿಂದು ಜಾಗರಣ ವೇದಿಕೆಯಿಂದ ಎರಡು ಕಡೆ ಪ್ರಕರಣ ದಾಖಲು

ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ನಾಲಗೆ ಹರಿ ಬಿಟ್ಟ ಅರಣ್ಯ ಅಧಿಕಾರಿ: ಹಿಂದು ಜಾಗರಣ ವೇದಿಕೆಯಿಂದ ಎರಡು ಕಡೆ ಪ್ರಕರಣ ದಾಖಲು

ಪುತ್ತೂರು:  ಬಿಲ್ಲವ ಸಮಾಜದ 1ಲಕ್ಷ ಹುಡುಗಿಯರು ವೇಶ್ಯೆಯಾಗಲು ಹಿಂದೂ ಸಂಘಟನೆಯ ಯುವಕರು ಕಾರಣ. ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದು ಹುಡುಗರು ಎಂದು ಅರಣ್ಯಧಿಕಾರಿಯಾಗಿ ಪಂಜದಲ್ಲಿ ಸೇವೆ ಸಲ್ಲಿಸುತಿದ್ದ ಸಂಜೀವ ಪೂಜಾರಿ ಹಿಂದೂ ಸಮಾಜದ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನ ಕಾರಿಯಾಗಿ ಮಾತನಾಡಿದ್ದು,

ಈ ಮಾತುಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು ಹಿಂದು ಜಾಗರಣ ವೇದಿಕೆಯ ಗಮನಕ್ಕೆ ಬಂದ ಕೂಡಲೇ ಬೆಳ್ಳಾರೆ ಠಾಣೆಯಲ್ಲಿ ಮತ್ತು ಮಂಗಳೂರು ಅರಣ್ಯ ಅಧಿಕಾರಿ ಅಂತೋಣಿ ಮರಿಯಪ್ಪ ಇವರಿಗೆ ದೂರು ನೀಡಿದ್ದು ಪ್ರಕರಣ ದಾಖಾಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈತ ಈ ಹಿಂದೇಯೂ ಇಂತಹ ವಿಕೃತ ಮನಸ್ಥಿತಿಯಿಂದ ಸೇವೆಯಿಂದ ಅಮಾನತು ಆಗಿದ್ದು ಮತ್ತೆ ಸಿಕ್ಕ ಸಿಕ್ಕವರಲ್ಲಿ ಕಾಡಿ ಬೇಡಿ ಸೇವೆಗೆ ಹಾಜರಾಗುವ ಸಮಯದಲ್ಲಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದನೆ ಎಂದು ತಿಳಿದು ಬಂದಿದೆ. 2 ದಿನದ ಒಳಗೆ ಪ್ರಕರಣ ಅಮಾನತು ಮಾಡದಿದ್ದರೆ ಮನೆ ಮತ್ತು dysp ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ