image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನೆಯಲ್ಲಿ ಮಲಗಿದ್ದಾಗ ವೃದ್ಧನ ಕುತ್ತಿಗೆಯಿಂದ 20 ಗ್ರಾಂ ಚಿನ್ನದ ಸರ ಸುಲಿಗೆ

ಮನೆಯಲ್ಲಿ ಮಲಗಿದ್ದಾಗ ವೃದ್ಧನ ಕುತ್ತಿಗೆಯಿಂದ 20 ಗ್ರಾಂ ಚಿನ್ನದ ಸರ ಸುಲಿಗೆ

ಬಂಟ್ವಾಳ: ತಡರಾತ್ರಿ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ವೃದ್ಧರೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ನಡೆದಿದೆ.

ಇಡ್ಕಿದು ನಿವಾಸಿ ಕೆ. ಸೂರ್ಯನಾರಾಯಣ (79) ಎಂಬುವವರು ನೀಡಿದ ದೂರಿನನ್ವಯ, ಜುಲೈ 25 ರಂದು ರಾತ್ರಿ ಅವರು ಮನೆಯವರೊಂದಿಗೆ ಮಲಗಿದ್ದ ವೇಳೆ ತಡರಾತ್ರಿ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದಾರೆ. ಫಿರ್ಯಾದಿದಾರರು ಎದ್ದು ನೋಡುವಷ್ಟರಲ್ಲಿ, ಆ ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕ ಹಾಗೂ 2,60,000 ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 163/2026, ಕಲಂ: 329(4), 115(2), 309(4) ಜೊತೆಗೆ 3(5) BNS 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ