ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವಾರೆಂಟ್ ಅಸಾಮಿಯಾದ ಮೊಹಮ್ಮದ್ ಅಬ್ದುಲ್ ಫಯಾನ್ ಪ್ರಾಯ 27 ವರ್ಷ, ತಂದೆ: ಕೆ.ಎಂ. ಅಬ್ಬಾಸ್, ವಾಸ: ಬಟ್ಯಡ್ಕ ಮನೆ, ಬದ್ರಿಯನಗರ, ಕಲ್ಕಟ್ಟ, ಮಂಜನಾಡಿ ಗ್ರಾಮ ಉಳ್ಳಾಲ ತಾಲೂಕು ಈತನ ವಿರುದ್ದ ಕೊಣಾಜೆ ಠಾಣೆಯಲ್ಲಿ, ಉಳ್ಳಾಲ ಠಾಣೆಯಲ್ಲಿ, ಕಡಬ ಠಾಣೆಯಲ್ಲಿ, ಬರ್ಕೆ ಠಾಣೆಯಲ್ಲಿ, ಉಪ್ಪಿನಂಗಡಿಯಲ್ಲಿ, ಪುತ್ತೂರು ನಗರ ಠಾಣೆಯಲ್ಲಿ ಹಾಗೂ ಬಂಟ್ವಾಳ ನಗರ ಠಾಣೆಗಳಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ. ಕೊಣಾಜೆ ಪೊಲೀಸ್ ಠಾಣಾ ಮೊ.ನಂ.22/20 ರಲ್ಲಿ ಕಲಂ: 454, 457, 380, ಐಪಿಸಿ ಪ್ರಕರಣದಲ್ಲಿ ಈತನು ಸುಮಾರು 1 ವರ್ಷದಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದವನನ್ನು ದಿನಾಂಕ: 13-10-2024 ರಂದು ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ಬಿ, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಸಿಬ್ಬಂದಿಗಳಾದ ಹೆಚ್.ಸಿ ಮಹಮ್ಮದ್ ಶರೀಫ್, ಪಿಸಿ 765 ಸಂತೋಷ ರವರು ಕೇರಳ ರಾಜ್ಯದ ಮಂಜೇಶ್ವರ ಎಂಬಲ್ಲಿ ಸದ್ರಿ ವಾರಂಟ್ ಆಸಾಮಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೊಲೀಸ್ ಇಲಾಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.