image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಡರಾತ್ರಿ ಅನಧಿಕೃತ ಹೋಟೆಲ್ ತೆರೆದು ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ತಡರಾತ್ರಿ ಅನಧಿಕೃತ ಹೋಟೆಲ್ ತೆರೆದು ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ನಗರದ ಕಬಕ ಜಂಕ್ಷನ್ ಬಳಿ ನಿಯಮಬಾಹಿರವಾಗಿ ತಡರಾತ್ರಿವರೆಗೂ ಹೋಟೆಲ್ ತೆರೆದು, ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜೂನ್ 18ರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ 10.30ರ ಸುಮಾರಿಗೆ ಪುತ್ತೂರು ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಚಂದ್ರ ಮತ್ತು ಸಿಬ್ಬಂದಿ ಅಸ್ತಮ್ ಅವರು ಗಸ್ತು ತಿರುಗುತ್ತಿದ್ದಾಗ, ಮೊಹಮ್ಮದ್ ಆಸೀಫ್ ಎಂಬುವರಿಗೆ ಸೇರಿದ ‘ಕೆ.ಎಸ್. ಆಲ್ಫಾ ಕಾರ್ನರ್’ ಹೋಟೆಲ್ ತೆರೆದಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅದನ್ನು ಮುಚ್ಚುವಂತೆ ಸೂಚಿಸಿ ತೆರಳಿದ್ದರು. ಆದರೆ, ರಾತ್ರಿ 1.30ರ ಸುಮಾರಿಗೆ ರಾತ್ರಿ ಗಸ್ತು ಅಧಿಕಾರಿಯಾಗಿದ್ದ ಪಿ.ಎಸ್.ಐ ಸುರೇಶ್ ಅವರು ಅದೇ ಸ್ಥಳಕ್ಕೆ ಭೇಟಿ ನೀಡಿದಾಗ ಹೋಟೆಲ್ ತೆರೆದಿರುವುದು ಮತ್ತು ಗ್ರಾಹಕರು ಕುಳಿತಿರುವುದು ಕಂಡುಬಂದಿದೆ. ಈ ವೇಳೆ ಹೋಟೆಲ್ ಮುಚ್ಚುವಂತೆ ಪೊಲೀಸರು ಸೂಚಿಸಿದಾಗ, ಅಲ್ಲಿ ಕುಳಿತಿದ್ದ ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45) ಎಂಬಾತನು ಪಾನಮತ್ತನಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ಘಟನೆಯನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಈ ಹಿಂದೆ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉಜ್ವಲ್ ಕುಮಾರ್ ಪ್ರಭು ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ 127/2026ರಂತೆ ಮುಂಜಾಗ್ರತಾ ಕ್ರಮದ ವರದಿ ದಾಖಲಿಸಲಾಗಿದೆ.

ಅಲ್ಲದೆ, ಅವಧಿ ಮೀರಿ ಹೋಟೆಲ್ ನಡೆಸುತ್ತಿದ್ದ ಮಾಲೀಕರ ವಿರುದ್ಧವೂ ಕ್ರಮ ಕೈಗೊಂಡು ಹೋಟೆಲ್ ಮುಚ್ಚಿಸಲಾಗಿದೆ. ಇನ್ನು, ಈ ಘಟನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೆ, ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಪಿ.ಎಸ್.ಐ ಸುರೇಶ್ ಅವರಿಗೆ ಮೇಲಾಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ ಪ್ರಕಟನೆಯಲ್ಲಿ ತಿಳಿದಿದ್ದಾರೆ.

Category
ಕರಾವಳಿ ತರಂಗಿಣಿ