ಮಂಗಳೂರು: ಬಸ್ಸನ್ನು ಅಜಾಗರೂಕತೆಯಿಂದ ಚಾಲನೆ ಮಾಡಿರುವ ಚಾಲಕನನ್ನು ವಶಕ್ಕೆ ಪಡೆದ ಮೂಡುಬಿದಿರೆ ಪೊಲೀಸರು ಆರ್‌ಟಿಒ ಮೂಲಕ ಆತನ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಿಸಿರುವ ಘಟನೆ ನಡೆದಿದೆ.
ಕಾರ್ಕಳ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ ಚಾಲಕ ಮಹಮ್ಮದ್ ಇಸ್ಮಾಯಿಲ್ ರ‌್ಯಾಶ್ ಆಗಿ ಡ್ರೈವಿಂಗ್ ಮಾಡುತ್ತಿದ್ದ. ಈತ ಪ್ರಮುಖ ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಬಸ್ ಅನ್ನು ಓಡಿಸುತ್ತಿದ್ದ. ಇದೀಗ ಮೂಡಬಿದಿರೆಯಿಂದ ಮಂಗಳೂರು ದಾರಿಯ ತೋಡಾರ್‌ನಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದ. ಅತಿಯಾದ ವೇಗದಲ್ಲಿ ಬಸ್ ಅನ್ನು ಚಲಾಯಿಸುತ್ತಿದ್ದುದನ್ನು ಇತರ ವಾಹನ ಸವಾರರು ವಿಡಿಯೋ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಇದೀಗ ಬಸ್ ಅನ್ನು ಸೀಝ್ ಮಾಡಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಚಾಲಕ ಇಸ್ಮಾಯಿಲ್‌ನ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಆರ್‌ಟಿಒಗೆ ವರದಿ ನೀಡಿದ್ದರು. ಆದ್ದರಿಂದ ಆತನ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ.