image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಮ್ತಾಜ್ ಅಲಿ ಆತ್ಮಹತ್ಯೆ ಸಂಬಂದಿಸಿದಂತೆ ಮೂವರನ್ನು ಬಂದಿಸಿದ ಸಿಸಿಬಿ : ಆರೋಪಿ ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತರ್ ನನ್ನು ವಜಾ ಗೊಳಿಸಿ ಆದೇಶ

ಮುಮ್ತಾಜ್ ಅಲಿ ಆತ್ಮಹತ್ಯೆ ಸಂಬಂದಿಸಿದಂತೆ ಮೂವರನ್ನು ಬಂದಿಸಿದ ಸಿಸಿಬಿ : ಆರೋಪಿ ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತರ್ ನನ್ನು ವಜಾ ಗೊಳಿಸಿ ಆದೇಶ

ಮಂಗಳೂರು: ಮಾಜಿ ಶಾಸಕ ಮೊಯಿದ್ದಿನ್ ಬಾವಾ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು  ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರು ಪ್ರಕರಣ ಪ್ರಮುಖ ಮಾಸ್ಟರ್ ಮೈಂಡ್ ಎ2 ಆರೋಪಿ ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಶಾಫಿ. 

ಆತ್ಮಹತ್ಯೆಗೆ  ಸಂಬಂಧಿಸಿದಂತೆ ಆರು ಜನರ ಮೇಲೆ ಕಾವೂರು ಠಾಣೆಯಲ್ಲಿ ಎಪ್‌ಐಆರ್ ದಾಖಲಾಗಿತ್ತು.

ಪ್ರಕರಣದ ಎ1 ಆರೋಪಿಯಾಗಿರುವ ಆಯಿಷಾ ಅಲಿಯಾಸ್ ರೆಹಮತ್, ಆಕೆಯ ಪತಿ ಪ್ರಕರಣ ಎ5

ಆರೋಪಿ ಶೋಯೆಬ್ ಮತ್ತು ಸಿರಾಜ್ ನನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದರ‌ ನಡುವೆ ಮಂಗಳೂರು ಉತ್ತರ ವಿದಾನಸಭಾ ಕ್ಷೇತ್ರದಲ್ಲಿ ಪ್ರಮುಖ  ಜವಾಬ್ದಾರಿ ಹೊತ್ತಿದ್ದ ಆರೋಪಿ ಅಬ್ದುಲ್ ಸತ್ತಾರ್ ನನ್ನು ಎಲ್ಲಾ ಜವಾಬ್ದಾರಿಯಿಂದ ಆರು ವರ್ಷಗಳ ಕಾಲ ವಜಾಗೊಳಿಸಿ ಆದೇಶ ಹೊರಡಿಸಿದೆ.

Category
ಕರಾವಳಿ ತರಂಗಿಣಿ