image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಪ್ರಾಪ್ತರಿಗೆ ಬೈಕ್ ನೀಡಿದ ಮಾಲೀಕರಿಗೆ ತಲಾ 25,000 ರೂ. ಭಾರಿ ದಂಡ ವಿಧಿಸಿದ ನ್ಯಾಯಾಲಯ!

ಅಪ್ರಾಪ್ತರಿಗೆ ಬೈಕ್ ನೀಡಿದ ಮಾಲೀಕರಿಗೆ ತಲಾ 25,000 ರೂ. ಭಾರಿ ದಂಡ ವಿಧಿಸಿದ ನ್ಯಾಯಾಲಯ!

ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಾಹನಗಳ ಮಾಲೀಕರಿಗೆ ಮಾನ್ಯ ನ್ಯಾಯಾಲಯವು ತಲಾ 25,000 ರೂಪಾಯಿಗಳ ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕಳೆದ ಏಪ್ರಿಲ್ 6 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ನಲ್ಲಿ KA-19-HT-9694 ನೋಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏಪ್ರಿಲ್ 28 ರಂದು ಬಿಸಿ ರೋಡ್‌ ಬಳಿ KA-05-KG-6785 ನೋಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಲಾಯಿಸುತ್ತಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರ ವಾಹನ ತಪಾಸಣೆ ವೇಳೆ ಪತ್ತೆಯಾಗಿತ್ತು.

ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಅಪ್ರಾಪ್ತರಿಗೆ ವಾಹನ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ವಾಹನಗಳ ಮಾಲೀಕರ ವಿರುದ್ಧ ಕಲಂ: 199(A) IMV ಅಡಿಯಲ್ಲಿ ಮಾನ್ಯ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಇಂದು (ಮೇ 18) ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ತಪ್ಪು ಎಸಗಿದ ಇಬ್ಬರೂ ವಾಹನ ಮಾಲೀಕರಿಗೆ ತಲಾ 25,000/- ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವ ಪೋಷಕರು ಮತ್ತು ವಾಹನ ಮಾಲೀಕರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಸಂದೇಶವಾಗಿದೆ.

Category
ಕರಾವಳಿ ತರಂಗಿಣಿ