ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಭಾವ ಸಹೋದರ ಬಿ.ಎಂ.ಮುಲ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ಪೊಲೀಸ್ ದೂರು ದಾಖಲಾಗಿದ್ದು, ಮುಲ್ತಾಜ್ ಅಲಿಯವರ ಸಹೋದರ ಹೈದರ್ ಅಲಿಯವರು ಕಾವೂರು ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತರ್ ಮತ್ತು ಮುಮ್ತಾಜ್ ಅಲಿಯವರ ಕಾರು ಚಾಲಕ ಸಿರಾಜ್ ಸೇರಿ ರೆಹಮತ್ ಎನ್ನುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಲ್ತಾಜ್ ಅಲಿಯವರನ್ನು ರೆಹಮತ್ ಎಂಬ ಮಹಿಳೆ ಬ್ಲ್ಯಾಕ್ ಮೈಲ್ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿರುವ ಆರೋಪ ಇವರ ಮೇಲಿದೆ. ಈ ನಡುವೆ ಮುಮ್ತಾಜ್ ಅಲಿ ಮೃತ ದೇಹ ಪಾಲ್ಗುಣಿ ನದಿಯಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ.