image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡ್ರಗ್ಸ್ ಜಾಲ ಪತ್ತೆ :5 ವಿದ್ಯಾರ್ಥಿಗಳ ಬಂಧನ, 50 ಮಂದಿಗೆ ಕೌನ್ಸೆಲಿಂಗ್ - ಪೊಲೀಸ್ ಕಮಿಷನರ್

ಡ್ರಗ್ಸ್ ಜಾಲ ಪತ್ತೆ :5 ವಿದ್ಯಾರ್ಥಿಗಳ ಬಂಧನ, 50 ಮಂದಿಗೆ ಕೌನ್ಸೆಲಿಂಗ್ - ಪೊಲೀಸ್ ಕಮಿಷನರ್

ಮಂಗಳೂರು:  ನಗರದಲ್ಲಿ ಶೈಕ್ಷಣಿಕ ಪರಿಸರದ ಮೇಲೆ ಕಪ್ಪು ನೆರಳು ಚೆಲ್ಲುತ್ತಿದ್ದ ಬೃಹತ್ ಡ್ರಗ್ಸ್ ಜಾಲವೊಂದನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ವಿದ್ಯಾರ್ಥಿಗಳೇ ಸೇರಿಕೊಂಡು ನಡೆಸುತ್ತಿದ್ದ ಈ ಜಾಲವನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

​ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಪತ್ತೆಯಾದ ವಿಷಯವನ್ನು ಜಾಗೃತ ಪೋಷಕರೊಬ್ಬರು ಪೊಲೀಸರ ಗಮನಕ್ಕೆ ತಂದಿದ್ದರು. ಈ ಸುಳಿವಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ಕೈಗೊಂಡಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬಂಧಿತ ಐವರು ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನವರಾಗಿದ್ದು, ಹಾಸ್ಟೆಲ್‌ಗಳಲ್ಲಿ ಇರದೆ ಹೊರಗಡೆ ಬಾಡಿಗೆ ರೂಮ್‌ಗಳನ್ನು ಮಾಡಿಕೊಂಡಿದ್ದರು. ಈ ರೂಮ್‌ಗಳನ್ನೇ ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದ ಅವರು, ಬೇರೆ ಕಡೆಯಿಂದ ಡ್ರಗ್ಸ್ ತರಿಸಿ, ಪ್ಯಾಕಿಂಗ್ ಮಾಡಿ ಇತರ ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದರು ಎನ್ನಲಾಗಿದೆ.
​ಈ ಜಾಲದಲ್ಲಿ ಸುಮಾರು ಆರು ಕಾಲೇಜುಗಳ 40 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಲ್ಲದ ಅನ್ಯ 10 ವ್ಯಕ್ತಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ. ಡ್ರಗ್ಸ್ ಸೇವನೆ ಮತ್ತು ಪೂರೈಕೆಯಲ್ಲಿ ಗುರುತಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಇಲಾಖೆಯಿಂದ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮೀಷನರ್, ಮಕ್ಕಳು ಹಾಸ್ಟೆಲ್ ಬಿಟ್ಟು ಹೊರಗಡೆ ರೂಮ್ ಮಾಡುತ್ತಿದ್ದರೆ ಅದರ ಬಗ್ಗೆ ನಿಗಾ ಇರಲಿ ಎಂದು ಪೋಷಕರಿಗೆ ಕರೆ ನೀಡಿದ್ದಾರೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ಅಥವಾ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ಜಂಟಿಯಾಗಿ ಮಕ್ಕಳ ಮೇಲೆ ನಿಗಾ ಇಟ್ಟರೆ ಮಾತ್ರ ಇಂತಹ ಪಿಡುಗನ್ನು ತಡೆಯಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ