image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಾಂಜಾ ಮಾರಾಟ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉತ್ತರ ಪ್ರದೇಶದಲ್ಲಿ ಬಂಧನ

ಗಾಂಜಾ ಮಾರಾಟ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉತ್ತರ ಪ್ರದೇಶದಲ್ಲಿ ಬಂಧನ

ಮಂಗಳೂರು: ಗಾಂಜಾ ಮಾರಾಟ ಪ್ರಕರಣವೊಂದರಲ್ಲಿ ಕಳೆದ 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಠಾಣಾ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

​ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ 328/2016, ಕಲಂ 8(c) ಮತ್ತು 20(b) ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ಹಾಗೂ ಎಲ್‌ಪಿಸಿ (LPC) ಸಂಖ್ಯೆ 11/2024ಕ್ಕೆ ಸಂಬಂಧಿಸಿದಂತೆ ನಸೀಮ್ ಎಂಬಾತ ಆರೋಪಿಯಾಗಿದ್ದನು. ಈತ ಸುಮಾರು 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿ ಪರಾರಿಯಾಗಿದ್ದನು.

​ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಸುಳ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ರಮೇಶ್ ಎಲ್ (HC 359), ರಾಜು ನಾಯ್ಕ ಡಿ (HC 368) ಮತ್ತು ಪೊಲೀಸ್ ಕಾನ್ಸ್‌ಟೇಬಲ್ ವಿಖ್ಯಾತ ಜೆ ಗೌಡ ಅವರನ್ನೊಳಗೊಂಡ ತಂಡವು, ಉತ್ತರ ಪ್ರದೇಶದ ಖಾಜಿಪುರ ಎಂಬಲ್ಲಿ ಆರೋಪಿಯನ್ನು ಮಾರ್ಚ್ 20, 2026ರಂದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Category
ಕರಾವಳಿ ತರಂಗಿಣಿ