ಉಪ್ಪಿನಂಗಡಿ: ಯಾವುದೇ ಪರವಾನಿಗೆ ಇಲ್ಲದೆ ಶೆಡ್ ಒಂದರಲ್ಲಿ ಬರೋಬ್ಬರಿ 4,175 ಲೀಟರ್ ಡೀಸೆಲ್ ಅನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ ಕೆ ಅವರಿಗೆ ದೊರೆತ ರಹಸ್ಯ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ರೂಪಿಸಲಾಗಿತ್ತು. 09-03-2026 ರಂದು ರಾತ್ರಿ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳ ತಂಡ ಮುದಲ್ತಿಯಾರ್ ನಿವಾಸಿ ಜಗದೀಶ್ (35) ಎಂಬಾತನ ಮನೆಯ ಪಕ್ಕದ ಶೆಡ್ ಮೇಲೆ ದಾಳಿ ನಡೆಸಿತು.
ದಾಳಿಯ ವೇಳೆ 20 ಬ್ಯಾರೆಲ್ ಡೀಸೆಲ್ ತಲಾ 200 ಲೀಟರ್ ಸಾಮರ್ಥ್ಯ. 05 ಕ್ಯಾನ್ ಡೀಸೆಲ್ ತಲಾ 35 ಲೀಟರ್ ಸಾಮರ್ಥ್ಯ.ಒಟ್ಟು ಮೊತ್ತ ಸುಮಾರು 4,175 ಲೀಟರ್ ಆಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ರೂ. 3,50,000/-.ಸ್ಥಳದಲ್ಲಿ ಡೀಸೆಲ್ ತುಂಬಿಸಲು ಬಳಸುತ್ತಿದ್ದ ಹಲವಾರು ಖಾಲಿ ಬ್ಯಾರೆಲ್ ಹಾಗೂ ಕ್ಯಾನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳಿಲ್ಲದೆ ಈ ರೀತಿ ಡೀಸೆಲ್ ಸಂಗ್ರಹಿಸಿರುವುದು ದೊಡ್ಡ ಮಟ್ಟದ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಲಿಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಈ ಕೃತ್ಯ ಎಸಗಿದ ಕಾರಣ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 35/2026) ಪ್ರಕರಣ ದಾಖಲಾಗಿದೆ. ಆರೋಪಿಯ ಮೇಲೆ , ಭಾರತೀಯ ನ್ಯಾಯ ಸಂಹಿತೆ (BNS) 2023: ಕಲಂ 287 ಮತ್ತು 3(5), ಅಗತ್ಯ ವಸ್ತುಗಳ ಕಾಯ್ದೆ 1955: ಕಲಂ 3 ಮತ್ತು 7, ಪೆಟ್ರೋಲಿಯಂ ಕಾಯ್ದೆ 1934: ಕಲಂ 23.
ಪ್ರಸ್ತುತ ಆರೋಪಿ ಜಗದೀಶ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಡೀಸೆಲ್ ಎಲ್ಲಿಂದ ತರಲಾಗಿತ್ತು ಮತ್ತು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.