image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು

ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು

 ಬೆಳ್ತಂಗಡಿ: ತಾಲೂಕಿನ ಸಾವ್ಯ ಗ್ರಾಮದ ಪಿಲಿಪಂಜರ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ವೇಣೂರು ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಕೋಳಿಗಳು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
​ವೇಣೂರು ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ಅಕ್ಷಯ್ ಡವಗಿ ಅವರು ಮಂಗಳವಾರ (ಮಾರ್ಚ್ 03) ಮಧ್ಯಾಹ್ನ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದಾಗ, ಸಾವ್ಯ ಗ್ರಾಮದ ಕೊಕ್ರಾಡಿ-ಎಳಂಬ ಸಾರ್ವಜನಿಕ ರಸ್ತೆ ಬದಿಯ ಗುಡ್ಡ ಪ್ರದೇಶದಲ್ಲಿ 7-8 ಜನರ ಗುಂಪು ಅಕ್ರಮವಾಗಿ ಕೋಳಿ ಅಂಕ ಆಡುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಜುಗಾರಿ ಆಟವಾಡುತ್ತಿದ್ದವರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಬಿಟ್ಟುಹೋಗಿದ್ದ ಮೂರು ಹುಂಜ ಕೋಳಿಗಳು ಮತ್ತು 2,100 ರೂ. ನಗದು ಹಣ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಪರಾರಿಯಾದ ಆರೋಪಿಗಳನ್ನು ಪ್ರಕಾಶ ಪೆರ್ಮುಡ, ಸಂಜೀವ ಕುತ್ಲೂರು, ಸುರೇಶ ಕುತ್ಲೂರು, ಸೇಸಪ್ಪ ಶೆಟ್ಟಿ ಸುಲ್ಕೇರಿ ಮತ್ತು ಜಯಚಂದ್ರ ರೈ ಕುತ್ಲೂರು ಹಾಗೂ ಇತರ ಮೂವರು ಎಂದು ಗುರುತಿಸಲಾಗಿದೆ.
​ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ (KP Act) ಕಲಂ 87, 93 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 3, 11ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ