image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಿನ್ನ ಪಾಲೀಶ್ ಹೆಸರಲ್ಲಿ ವಂಚಿಸುತ್ತಿದ್ದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ವಶಕ್ಕೆ

ಚಿನ್ನ ಪಾಲೀಶ್ ಹೆಸರಲ್ಲಿ ವಂಚಿಸುತ್ತಿದ್ದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ವಶಕ್ಕೆ

ಬೆಳ್ತಂಗಡಿ: ಮನೆ ಬಾಗಿಲಿಗೆ ಬಂದು ಚಿನ್ನದ ಒಡವೆಗಳನ್ನು ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿ, ದ್ರಾವಣದ ಮೂಲಕ ಚಿನ್ನ ಕದ್ದು ವಂಚಿಸುತ್ತಿದ್ದ ಅಂತರರಾಜ್ಯ ವಂಚಕನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ ಫೆಬ್ರವರಿ 10, 2026 ರಂದು ಈ ವಂಚನೆ ನಡೆದಿತ್ತು. ಆರೋಪಿಯು ಸೇಲ್ಸ್‌ಮ್ಯಾನ್ ರೂಪದಲ್ಲಿ ಮನೆಗೆ ಬಂದು, ಹಳೆಯ ಚಿನ್ನಾಭರಣಗಳನ್ನು ಹೊಳೆಯುವಂತೆ ಮಾಡಿಕೊಡುವುದಾಗಿ ಮಾಲೀಕರನ್ನು ನಂಬಿಸಿದ್ದನು. ಪಾಲೀಶ್ ಮಾಡುವ ನೆಪದಲ್ಲಿ ಯಾವುದೋ ರಾಸಾಯನಿಕ ದ್ರಾವಣವನ್ನು ಬಳಸಿ, ಚಿನ್ನದ ಒಂದಂಶವನ್ನು ಕರಗಿಸಿ ವಂಚನೆ ಎಸಗಿದ್ದನು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ: 13/2026, ಬಿ.ಎನ್.ಎಸ್. 2023 ಕಲಂ 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

​ಬಂಧಿತನನ್ನು ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯಿಂದ ಸುಮಾರು 75,000 ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
​ಕಾರ್ಯಾಚರಣೆ ನಡೆಸಿದ 
​ವೇಣೂರು ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ ಮತ್ತು ಶ್ರೀಮತಿ ಓಮನ ಎನ್. ಅವರ ನೇತೃತ್ವದಲ್ಲಿ ಚುರುಕಿನ ತನಿಖೆ ನಡೆಸಿದ ತಂಡವು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ತಂಡದಲ್ಲಿ ಎ.ಎಸ್.ಐ ಗಳಾದ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಕೃಷ್ಣ, ಶ್ರೀಮತಿ ಕೇಶವತಿ ಹಾಗೂ ಸಿಬ್ಬಂದಿಗಳಾದ ಬಸವರಾಜ್, ಮೋಹನ್ ಮತ್ತು ರಾಕೇಶ್ ಭಾಗವಹಿಸಿದ್ದರು.

ಸಾರ್ವಜನಿಕರಿಗೆ ಎಚ್ಚರಿಕೆ:

​ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚುತ್ತಿದ್ದು, ಮನೆ ಬಾಗಿಲಿಗೆ ಬರುವ ಅಪರಿಚಿತ ವ್ಯಕ್ತಿಗಳಿಗೆ ಚಿನ್ನಾಭರಣ ನೀಡುವ ಮುನ್ನ ಎಚ್ಚರದಿಂದಿರಬೇಕು. ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲಾಖೆ ಕೋರಿದೆ.

Category
ಕರಾವಳಿ ತರಂಗಿಣಿ