image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರು ಮಂದಿ ಅಂತರ್‌ರಾಜ್ಯ ಸೈಬ‌ರ್ ವಂಚಕರನ್ನು ಬಂದಿಸಿದ ಮಂಗಳೂರು ಪೊಲೀಸರು

ಆರು ಮಂದಿ ಅಂತರ್‌ರಾಜ್ಯ ಸೈಬ‌ರ್ ವಂಚಕರನ್ನು ಬಂದಿಸಿದ ಮಂಗಳೂರು ಪೊಲೀಸರು

ಮಂಗಳೂರು: ಸ್ನೇಹಿತರ ಬ್ಯಾಂಕ್  ಖಾತೆಯನ್ನು ಪಡೆದು ಸೈಬರ್ ವಂಚನೆ ಪ್ರಕರಣಕ್ಕೆ ಬಳಸಿ ಬಳಿಕ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೈಬರ್ ಅಪರಾಧ ಠಾಣೆಯ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (27) ಮತ್ತು ಉತ್ಪಲ ಸಂತೋಷ್ ಕೃಷ್ಣ (35), ಕರ್ನೂಲಿನ ಬುಡಿದಿನ್ನೆ ವಂಶಿ ಯಾನೆ ಗುರು (21), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬುಡೆ ಶ್ರೀನಿವಾಸ (38) ಮತ್ತು ಮುಲ್ಕಿಯ ಇಬ್ರಾಹೀಂ (35) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 18 ಮೊಬೈಲ್, 1 ಲ್ಯಾಪ್‌ಟಾಪ್, 12 ಸಿಮ್, 15 ಚೆಕ್ ಬುಕ್, 12 ಬ್ಯಾಂಕ್ ಪಾಸ್ ಬುಕ್, 18 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಲಾಗಿದೆ.

ಆರೋಪಿತರುಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಅಕರ್ಷಕ ಜಾಹೀರಾತುಗಳನ್ನು ನೀಡಿ ಬ್ಯಾಂಕ್ ಖಾತೆದಾರರ ಸಂಪೂರ್ಣ ವಿವರವನ್ನು ಪಡೆದು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬ‌ರ್ ವಂಚಕರಿಗೆ ರವಾನಿಸಿರುವುದು  ತನಿಕೆಯ ವೇಳೆ ತಿಳಿದುಬಂದಿದೆ.

ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ಪರಿಶೀಲಿಸಿದಾಗ ಹೈದರ್‌ಬಾದ್‌ನಲ್ಲಿ ಸೈಬರ್ ವಂಚನೆ ತಂಡ ಕಾರ್ಯಚರಿಸುತ್ತಿದ್ದಿದ್ದು ತಿಳಿದು ಬಂದಿದೆ. ನೈಬರ್ ಅಪರಾಧ ಪೊಲೀಸ್ ತಂಡವು ಹೈದರಬಾದ್‌ಗೆ ತೆರಳಿ ಸೈಬರ್ ವಂಚನೆ ತಂಡವನ್ನು ಪತ್ತೆ ಮಾಡಿ 5 ಜನರನ್ನು ಹೈದರ್‌ಬಾದ್‌ನಲ್ಲಿ ಮತ್ತು ಮಂಗಳೂರಿನಲ್ಲಿ ಓರ್ವನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ