image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ: ನೈತಿಕ ಪೊಲೀಸ್‌ಗಿರಿ ಅಟ್ಟಹಾಸಕ್ಕೆ ಪೊಲೀಸರಿಂದ ಬ್ರೇಕ್

ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ: ನೈತಿಕ ಪೊಲೀಸ್‌ಗಿರಿ ಅಟ್ಟಹಾಸಕ್ಕೆ ಪೊಲೀಸರಿಂದ ಬ್ರೇಕ್

ಮಂಗಳೂರು: ಮಂಗಳೂರಿನಲ್ಲಿ ಪದವಿ ವಿದ್ಯಾರ್ಥಿಯೊಬ್ಬನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುಸ್ತಾಫ ಹಾಗೂ ಮುಸ್ತಾಫ ಪೆರಿಯಡ್ಕ ಎಂದು ಗುರುತಿಸಲಾಗಿದೆ.

ನೈತಿಕ ಪೊಲೀಸ್‌ಗಿರಿಗೆ ಒಳಗಾದ ವಿದ್ಯಾರ್ಥಿ ಪದವಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ತನ್ನ ಸಹಪಾಠಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಲು, ಆತ ಅಕ್ಟೋಬ‌ರ್ 6ರಂದು ಬೆಳಗ್ಗೆ ತನ್ನ ಇತರ ಒಂಬತ್ತು ಮಂದಿ ಸಹಪಾಠಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ಕಾಲೇಜಿನಿಂದ ಪೆರಿಯಡ್ಕ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳಿಬ್ಬರು ಈ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಅವರ ಹೆಸರು, ಕಾಲೇಜು ಹಾಗೂ ಊರಿನ ಬಗ್ಗೆ ವಿಚಾರಿಸಿದ್ದಾರೆ. ಭಿನ್ನ ಕೋಮುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಾಗಿ ತೆರಳುತ್ತಿರುವುದನ್ನು ಆಕ್ಷೇಪಿಸಿದ ಆರೋಪಿಗಳು, ಕೋಮುದ್ವೇಷದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಓರ್ವ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ  107/2025, ໐: 126(2), 352, 351(2), 115(2), 353(2) 222 2023 03 ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Category
ಕರಾವಳಿ ತರಂಗಿಣಿ