ಮಂಗಳೂರು: ಮಂಗಳೂರು ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಮಲ್ಲೂರು ಗ್ರಾಮದ ಬದ್ರಿಯಾನಗರ ಪರಿಸರದಲ್ಲಿ ಶನಿವಾರ ಸುಝುಕಿ ಕಂಪೆನಿಯ ಹಳದಿ ಮತ್ತು ಸಿಲ್ವರ್ ಬಣ್ಣದ ಮಾಡರ್ನ್ ಎಂಬ ಹೆಸರಿನ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ತುಂಬಿಕೊಂಡು ಮಲ್ಲೂರು ಮಾರ್ಗದಿಂದ ಕಲ್ಪನೆ ಕಡೆಗೆ ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ನೀಡಿದ ಮಾಹಿತಿಯಂತೆ ಪೆÇಲೀಸ್ ಉಪನಿರೀಕ್ಷಕ ಅರುಣ್ ಕುಮಾರ್ ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ದಾಳಿ ಮಾಡಿರುತ್ತಾರೆ.
ಮಲ್ಲೂರು ಗ್ರಾಮದ ಕಂಜಿಲಕೋಡಿ ಎಂಬಲ್ಲಿ ಗೂಡ್ಸ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ಒಂದು ಕಪ್ಪು ಬಣ್ಣದ ಹಸುವನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ವಾಹನದ ಚಾಲಕ ಜೋಸೆಫ್ ನಿಲೇಶ್ ಡಿ ಅಲ್ಮೇಡಾ ಮತ್ತು ಕಣ್ಣೂರಿನ ಮಜೀದ್ ಎಂಬವರು ಕಣ್ಣೂರಿನಿಂದ ಕಲಾಯಿ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿರುವುದರಿಂದ ಮುಂದಿನ ಕ್ರಮದ ಬಗ್ಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮತ್ತು ಹಸುವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದು ಹಸುವನ್ನು ಗೋಶಾಲೆಗೆ ಹಸ್ತಾಂತರಿಸಲಾಗಿದೆ.
ದಕ್ಷಿಣ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತೆ ವಿಜಯ ಕ್ರಾಂತಿಮಾರ್ಗದರ್ಶನದಲ್ಲಿ ಪೆÇಲೀಸ್ ನಿರೀಕ್ಷಕರಾದ ಗವಿರಾಜ್, ಪಿಎಸ್‍ಐ ಅರುಣ್ ಕುಮಾರ್ ಹಾಗೂ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.