image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ದಂಪತಿಗಳ ಬಂಧನ

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ದಂಪತಿಗಳ ಬಂಧನ

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಿನ್ನಿಗೋಳಿ ಪರಿಸರದಲ್ಲಿನ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಹಣವನ್ನು ಹೊಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ಹಣ ಹಾಗೂ ಚಿನ್ನವನ್ನು  ಪರಿಚಯಸ್ದರಿಂದ ಪಡೆದು ಹಲವರಿಗೆ ವಂಚಿಸಿದ ಬಗ್ಗೆ ಅರೋಪಿಗಳಾದ 1] ರಿಚ್ಚರ್ಡ್ ಡಿ ಸೋಜಾಪ್ರಾಯ 52 ವರ್ಷತಂದೆಪ್ಯಾಟ್ರಿಕ್ ಡಿಸೋಜಾಖಾಯಂ ವಿಳಾಸಮನೆ ನಂಬ್ರ 2-81, ಕವತ್ತಾರು ಗುರಿ ಮನೆಕವತ್ತಾರು ಅಂಚೆ ಮತ್ತು ಗ್ರಾಮ.  2] ಶ್ರೀಮತಿ ರಶ್ಮಿ ರೀಟಾ ಪಿಂಟೋಪ್ರಾಯ 47 ವರ್ಷಗಂಡರಿಚ್ಚರ್ಡ್ ಡಿ ಸೋಜಾವಾಸಮನೆ ನಂಬ್ರ 2-81, ಕವತ್ತಾರು ಗುರಿ ಮನೆಕವತ್ತಾರು ಅಂಚೆ ಮತ್ತು ಗ್ರಾಮರವರ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ: 145/2024 ಕಲಂ: 406,420 ಐಪಿಸಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ಅಕ್ರ: 17/2025 ಕಲಂ: 406,420 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು , ಸದ್ರಿ ಪ್ರಕರಣದಲ್ಲಿ ಬಂಧನಕ್ಕೆ ಸಿಗದೇ ಸುಮಾರು 1 ವರೆ ವರ್ಷಗಳಿಂದ ಮುಂಬೈನಲ್ಲಿ  ತಲೆಮರೆಸಿಕೊಂಡಿದ್ದ ದಂಪತಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ಮಾನ್ಯ ನ್ಯಾಯಾಲಯವು ಅರೋಪಿ ರಿಚ್ಚರ್ಡ್ ಡಿ ಸೋಜಾಪ್ರಾಯ 52 ವರ್ಷತಂದೆಪ್ಯಾಟ್ರಿಕ್ ಡಿಸೋಜಾವಾಸಮನೆ ನಂಬ್ರ 2-81, ಕವತ್ತಾರು ಗುರಿ ಮನೆಕವತ್ತಾರು ಅಂಚೆ ಮತ್ತು ಗ್ರಾಮಮುಲ್ಕಿ ತಾಲೂಕು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ