ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆ ವಿಚಾರವಾಗಿ ಸೌಜನ್ಯ ಪರ ಹೋರಾಟಗಾರ, ಮಹೇಶ್ ಶೆಟ್ಟಿ ತಿಮರೋಡಿ ಆಪ್ತ ಜಯಂತ್ ಟಿ. ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳ್ತಂಗಡಿ ಪೊಲೀಸರ ಮನವಿ ಮೇರೆಗೆ ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ಆಯುಕ್ತ ಸ್ಟೆಲ್ಲಾ ವರ್ಗಿಸ್ ಸೆ.18 ರಂದು ಆದೇಶ ಹೊರಡಿಸಿದ್ದರು. ಈ ಗಡಿಪಾರು ಆದೇಶ ಮಾಡಿದ ಅಂಶಗಳು ಸರಿಯಾಗಿದೆ ಎಂದು ಗೊತ್ತಿದ್ದರೂ ಜನರನ್ನು ಪ್ರಚೋದಿಸಲು ಸುಳ್ಳು ಮಾಹಿತಿಗಳ ಮೂಲಕ ಬಂಟ್ವಾಳ ಡಿವೈಎಸ್ಪಿ ಮತ್ತು ಪುತ್ತೂರು ಎಸಿ ಬಗ್ಗೆ ಜಯಂತ್ ಟಿ. ತಪ್ಪು ಮಾಹಿತಿಯನ್ನು ವಿಡಿಯೋ ಮಾಡಿ ಪ್ರಸಾರ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್.ಎಸ್.-353(1)(ಬಿ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ