ಮೈಸೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ್ದು, ಪಾಕ್ ಪರ ಘೋಷಣೆ ಖಾಸಗಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾಗಿದೆ. ಸಾಮಾಜಿಕ ಕಾರ್ಯಕರ್ತ ಅರವಿಂದ್ ಶರ್ಮಾ ನೀಡಿದ್ದ ವೀಡಿಯೋ ಪರಿಶೀಲಿಸಿ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ. ಬೆಂಗಳೂರಿನ ಕ್ಲ್ಯೂ ಫೋರ್ ಎವಿಡೆನ್ಸ್ ಸಂಸ್ಥೆ ವರದಿ ನೀಡಿದೆ. ಸೆಪ್ಟೆಂಬರ್ 5ರಂದು ಜಿಲ್ಲೆಯ ಹುಣಸೂರು ಪಟ್ಟಣದ ಶಬ್ಬೀರ್ ನಗರದಲ್ಲಿ ನಡೆದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಪಾಕ್ ಪರ ಘೋಷಣೆ ಕೂಗಿದರು. ಈ ವೀಡಿಯೋ ತುಣುಕನ್ನು ಅರವಿಂದ್ ಶರ್ಮಾ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಪಾಕ್ ಪರ ಘೋಷಣೆ ಕೂಗಿದ್ದು ಸುಳ್ಳು ಎಂದು ಹುಣಸೂರಿನ ಈದ್ ಮಿಲಾದ್ ಕಮಿಟಿಯು ಅರವಿಂದ ಶರ್ಮಾ ವಿರುದ್ಧ ಡಿವೈಎಸ್ಪಿಗೆ ದೂರು ನೀಡಿದ್ದರು.
ಇದನ್ನು ಸಾಬೀತುಪಡಿಸುವ ಸಲುವಾಗಿ ವೀಡಿಯೋ ತುಣುಕುಗಳನ್ನ ಖಾಸಗಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿ ಅರವಿಂದ ಶರ್ಮಾ ಖಾತ್ರಿ ಮಾಡಿಕೊಂಡರು. ಪಾಕ್ ಪರ ಘೋಷಣೆ ಕೂಗಿದವರನ್ನು ಪತ್ತೆ ಮಾಡಿ ರಾಷ್ಟ್ರ ದ್ರೋಹದ ಕೇಸ್ ದಾಖಲಿಸಿ ಎಂದು ಅರವಿಂದ್ ಶರ್ಮಾ ಆಗ್ರಹಿಸಿದರು.