image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳೆಯರಂತೆ ವೇಷ ತೊಟ್ಟು ಮನೆಗೆ ಕನ್ನ ಹಾಕುತ್ತಿದ್ದ ತಂಡದ ಬಂಧನ: 600 ಗ್ರಾಂ ಬಂಗಾರ ವಶಕ್ಕೆ

ಮಹಿಳೆಯರಂತೆ ವೇಷ ತೊಟ್ಟು ಮನೆಗೆ ಕನ್ನ ಹಾಕುತ್ತಿದ್ದ ತಂಡದ ಬಂಧನ: 600 ಗ್ರಾಂ ಬಂಗಾರ ವಶಕ್ಕೆ

ಹೈದರಾಬಾದ್​: ತೆಲುಗು ರಾಜ್ಯದೆಲ್ಲೆಡೆ ಮಹಿಳೆಯರಂತೆ ದಿರಿಸು ಧರಿಸಿ 60 ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡದ ಸದಸ್ಯರನ್ನು ಬಂಧಿಸುವಲ್ಲಿ ರಾಜೇಂದ್ರ ನಗರ ಪೊಲೀಸ್​ ಠಾಣೆಯ ಕ್ರೈಂ ತಂಡ ಯಶಸ್ವಿಯಾಗಿದೆ. ಸಿಸಿಎಸ್​ ರಾಜೇಂದ್ರ ನಗರ ವಲಯದಲ್ಲಿ ಇವರನ್ನು ಬಂಧಿಸಲಾಗಿದೆ.

ಮೆಹದಿಪಟ್ಟಣಂ ನಿವಾಸಿಯಾಗಿರುವ ಆಟೋ ಡ್ರೈವರ್​ ಗುಂಜಪೊಗು ಸುಧಾಕರ್​ (33) ಸೇರಿದಂತೆ ಸರೂರ್​ನಗರ ನಿವಾಸಿಯಾಗಿರುವ ಕಾರ್​ ಕ್ಲೀನರ್​ ಭಂಡಾರಿ ಸಮ್ಯೊನ್​ (22), ಪುಣೆ ಮೂಲದ ನಾರಾಯಣಗುಡ ಕಾಲೋನಿ ವೆಲ್ಡರ್​​ ಶನಿದೇವ್​​ ಸಾಲುಂಕೆ (20), ಪಂಜಾಬ್​ ಮೂಲದ ಡ್ರೈವರ್​ ಅಮರ್​​ಜೀತ್​ ಸಿಂಗ್​ (31) ಬಂಧಿತರು.

ಬಂಧಿತರಿಂದ 35 ಲಕ್ಷ್ಯ ಮೌಲ್ಯದ 600 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬಜಾಜ್​ ಡಿಸ್ಕವರ್​ ಮೋಟರ್​ಸೈಕಲ್​ ವಶಕ್ಕೆ ಪಡೆಯಲಾಗಿದೆ.

ಸುಧಾಕರ್​​ ಈಗಾಗಲೇ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅನೇಕ ಕಾರು​ ಕಳ್ಳತನ, ಮನೆಗೆ ಕನ್ನದಂತಹ ಪ್ರಕರಣದಲ್ಲಿ ವಿವಿಧ ಪೊಲೀಸ್​ ಠಾಣೆಗಳಲ್ಲಿ ಈತನ ವಿರುದ್ಧ ಅಲ್ಲಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 50 ಲಕ್ಷ ಮೌಲ್ಯದ ಆಸ್ತಿ ಸಂಬಂಧಿತ ಕೊಲೆಯಲ್ಲಿ ಕೂಡ ಈತ ಭಾಗಿಯಾಗಿದ್ದಾನೆ. ಆಸಿಫ್​ ನಗರ ಪೊಲೀಸರು ಈತನ ವಿರುದ್ಧ ಪಿಡಿ ಕಾಯ್ದೆ ಅಡಿ ಹುಡುಕಾಟ ನಡೆಸಿದ್ದರು.

ಸುಧಾಕರ್​, ಸಾಯಿ, ಸಲ್ಮಾನ್​, ಕಾಕಾ, ಡೇಂಜರ್​ ಮತ್ತು ಆಂಟೋನಿ ಎಂಬ ಅನೇಕ ಹೆಸರಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬೈಕ್​ ಕಳ್ಳತನ ಮತ್ತು ಮನೆಗನ್ನ ಹಾಕುತ್ತಿದ್ದರು. ಅಲ್ಲದೇ ಆಗಾಗಗ್ಗೆ ವಾಹನದ ಮೂಲಕ ಕಣ್ಮರೆಯಾಗುತ್ತಿದ್ದರು. ಕಳ್ಳತನ ಮಾಡಿದ ದಿನ ಅವರು ವಿಗ್​ ಮತ್ತು ಮಹಿಳೆಯರ ಉಡುಪು ಧರಿಸಿ, ತಮ್ಮ ಗುರುತು ಮರೆ ಮಾಚಿಕೊಳ್ಳುತ್ತಿದ್ದರು.

Category
ಕರಾವಳಿ ತರಂಗಿಣಿ