ಮಂಗಳೂರು: ನಗರದ ಕುದ್ರೋಳಿ ಬೆಂಗ್ರೆ ಬಾಡಿಗೆ ಮನೆಯಲ್ಲಿ ಕಳೆದ 1 ತಿಂಗಳಿನಿಂದ ವಾಸಮಾಡಿಕೊಂಡಿದ್ದ ಬಿಹಾರ ಮೂಲದ ಬಬ್ಲು ಕುಮಾರ್ (16) ವರ್ಷ ಎಂಬುವವರು ಸೆಪ್ಟೆಂಬರ್ 8 ರಂದು ಸಂಜೆ 4 ಗಂಟೆಗೆ ಮನೆಯಿಂದ ಹೋದವರು ಕಾಣೆಯಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ:- ಎತ್ತರ: 5 ಅಡಿ 3 ಇಂಚು, ಗೋಧಿ ಮೈಬಣ್ಣ, ಸಪೂರ ಶರೀರ, ಎಡ ಕಣ್ಣಿನ ಹುಬ್ಬಿನ ಮೇಲೆ ಕಪ್ಪು ಎಳ್ಳು ಮಚ್ಚೆ ಇರುತ್ತದೆ. ಕಾಣೆಯಾದ ದಿನ ಕಪ್ಪು ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ, ಬೋಜ್ ಪುರಿ ಬಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.