image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಲಕನನ್ನು ಅಪಹರಿಸಿದ ಪ್ರಕರಣದಲ್ಲಿ ಮಹಿಳೆ ಸೆರೆ...

ಬಾಲಕನನ್ನು ಅಪಹರಿಸಿದ ಪ್ರಕರಣದಲ್ಲಿ ಮಹಿಳೆ ಸೆರೆ...

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕನನ್ನು ಕೊಲ್ಲೂರಿಗೆ ಕರೆದೊಯ್ದು ವಸತಿಗೃಹದಲ್ಲಿ ತಂಗಿದ್ದ ಮಹಿಳೆಯನ್ನು ಕೇರಳದ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಕೇರಳದ ಚೇರ್ತಲ ನಿವಾಸಿ 27 ವರ್ಷದ ವಿವಾಹಿತ ಮಹಿಳೆಯು 17 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಮಹಿಳೆಯ ವಿರುದ್ಧ ಪೋಕೋ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಇತ್ತೀಚೆಗೆ ಮಹಿಳೆ ಮತ್ತು ಬಾಲಕ ನಾಪತ್ತೆಯಾಗಿದ್ದರು. ಬಾಲಕನ ಮನೆಯವರು ಹಾಗೂ ಮಹಿಳೆಯ ಮನೆಯವರು ನಾಪತ್ತೆ ದೂರು ನೀಡಿದ್ದರು. ಪ್ರಯಾಣದ ನಡುವೆ ಎಲ್ಲೂ ಅವರು ತಮ್ಮ ಮೊಬೈಲ್ ಫೋನು ಬಳಸಿರದ ಕಾರಣ ಪೊಲೀಸರಿಗೆ ಅವರ ಸುಳಿವು ಸಿಕ್ಕಿರಲಿಲ್ಲ.ಕೊಲ್ಲೂರು ತಲುಪಿದ ಬಳಿಕ ಮಹಿಳೆಯು ತನ್ನ ಫೋನಿನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದು, ಈ ಸುಳಿವಿನ ಆಧಾರ ದಲ್ಲಿ ಕೊಲ್ಲೂರು ವಸತಿ ಗೃಹದಲ್ಲಿ ಪೊಲೀಸರು ಅವರನ್ನು ಪತ್ತೆ ಹಚ್ಚಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಕರೆದೊಯ್ದಿದ್ದರು. ವಸತಿಗೃಹದಲ್ಲಿ ದಾಖಲೆಗಳನ್ನು ನೀಡಿ ಕೊಠಡಿ ಪಡೆದಿದ್ದು, ಆತ ಸೋದರ ಸಂಬಂಧಿ ಎಂದು ಆಕೆ ಸುಳ್ಳು ಮಾಹಿತಿ ನೀಡಿದ್ದಳು ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಬಾಲಕನನ್ನು ಹೆತ್ತವರ ಜೊತೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ