ಉಜಿರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 28 ಕೊಲೆಗಳನ್ನು ಮಾಡಿದ್ದಾರೆಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದು ಒಂದಡೆಯಾದರೆ, ಇನ್ನೊಂದೆಡೆ ಬಿ ಎಲ್ ಸಂತೋಷ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಹಿನ್ನಲೆ ಬ್ರಹ್ಮಾವರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿತ್ತು. ಆ ಹಿನ್ನಲೆ ತಿಮರೋಡಿಯನ್ನು ವಶಕ್ಕೆ ಪಡೆಯಲು ಬ್ರಹ್ಮಾವರ ಪೊಲೀಸರು ತಿಮರೋಡಿ ಮನೆ ಬಳಿ ಬಂದಿದ್ದಾರೆ. ಆದರೆ ಮನೆಯೊಳಗಿರುವ ತಿಮರೋಡಿ ಬಹಳ ಸಮಯ ಹೊರಬಂದಿಲ್ಲ. ಈ ನಡುವೆ ತಿಮರೋಡಿ ಬೆಂಬಲಿಗರು ಘೋಷಣೆ ಕೂಗಲು ಪ್ರಾರಂಬಿಸಿದ್ದಾರೆ. ಗಿರೀಶ್ ಮಟ್ಟಣ್ಣ ಮತ್ತು ತಂಡ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ನಾವೇ ತಿಮರೋಡಿಯನ್ನು ಬ್ರಹ್ಮಾವರ ಸ್ಟೇಷನ್‌ಗೆ ಕರೆದುಕೊಂಡು ಬರುತ್ತೇವೆ ಹೊರತು ನಿಮ್ಮೊಂದಿಗೆ ಕಳುಹಿಸುವುದಿಲ್ಲ ಎಂದು ವಾಗ್ವಾದ ನಡೆಸಿದ್ದು,ಅದರಂತೆ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.