image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ನ್ಯಾಯಾಲಯದ ಆದೇಶದಂತೆ ಚಿನ್ನಾಭರಣ, ನಗದು ಬ್ಯಾಂಕ್‌ಗೆ ಹಸ್ತಾಂತರ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ನ್ಯಾಯಾಲಯದ ಆದೇಶದಂತೆ ಚಿನ್ನಾಭರಣ, ನಗದು ಬ್ಯಾಂಕ್‌ಗೆ ಹಸ್ತಾಂತರ

ಮಂಗಳೂರು: ನ್ಯಾಯಾಲಯದ ಆದೇಶದಂತೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗೆ ಸೇರಿದ ಚಿನ್ನಾಭರಣ ಮತ್ತು ನಗದನ್ನು ಶನಿವಾರ ಬ್ಯಾಂಕ್‌ ಮ್ಯಾನೇಜರ್‌ಗೆ ಹಸ್ತಾಂತರಿಸಲಾಗಿದೆ.ತಲಪಾಡಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನಿಂದ ಜ.17ರಂದು ಭಾರೀ ಮೌಲ್ಯದ ಚಿನ್ನಾಭರಣ ದರೋಡೆಯಾಗಿತ್ತು. ದುಷ್ಕರ್ಮಿಗಳ ತಂಡವೊಂದು ಹಾಡುಹಗಲೇ ಬ್ಯಾಂಕ್‌ಗೆ ನುಗ್ಗಿ ಪಿಸ್ತೂಲು, ತಲವಾರು, ಕತ್ತಿ ತೋರಿಸಿ ಹಣ, ಚಿನ್ನ ಕೊಡುವಂತೆ ಬ್ಯಾಂಕ್‌ನ ಉದ್ಯೋಗಿಗಳನ್ನು ಬೆದರಿಸಿ, ಲಾಕರ್‌ನಲ್ಲಿದ್ದ ಹಣ ಮತ್ತು ಚಿನ್ನವನ್ನು ದೋಚಿ ಕಾರಿನಲ್ಲಿ ಪರಾರಿಯಾಗಿತ್ತು.ನಂತರ ಪೊಲೀಸರು ದರೋಡೆಕೋರರನ್ನು ಬಂದಿಸಿ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಸಂಬಂಧಿಸಿದ ಚಿನ್ನಾಭರಣ ಮತ್ತು ನಗದನ್ನು ಮರಳಿಸುವಂತೆ ಬ್ಯಾಂಕ್ ಮ್ಯಾನೇಜರ್ ವಾಣಿ ಎಲ್‌. ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಶನಿವಾರ ನ್ಯಾಯಾಲಯದ ವಶದಲ್ಲಿದ್ದ 18 ಕೆ.ಜಿ. ಚಿನ್ನಾಭರಣ ಮತ್ತು 13.50 ಕೋ.ರೂ.ವನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ