image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಮೊಬೈಲ್ ಸರಣಿ ಕಳ್ಳತನ: ಠಾಣೆಯ ಮೆಟ್ಟಿಲೇರಿದ ಆಡಳಿತ ಮಂಡಳಿ

ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಮೊಬೈಲ್ ಸರಣಿ ಕಳ್ಳತನ: ಠಾಣೆಯ ಮೆಟ್ಟಿಲೇರಿದ ಆಡಳಿತ ಮಂಡಳಿ

ಮಂಗಳೂರು: ನಗರದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರಣಿ ಮೊಬೈಲ್ ಕಳ್ಳತನದ ಘಟನೆಯೊಂದು ಬೆಳಕಿಗೆ ಬಂದಿದ್ದು, ಆಡಳಿತ ಮಂಡಳಿ ಠಾಣೆಯ ಮೆಟ್ಟಿಲೇರಿರುವ ಬಗ್ಗೆ ವರದಿಯಾಗಿದೆ. ಸುಮಾರು 20 ರಿಂದ 30 ವಿದ್ಯಾರ್ಥಿಗಳ ಮೊಬೈಲ್ ಫೋನುಗಳು ನಿಗೂಢ ರೀತಿಯಲ್ಲಿ ಕಳೆದುಹೋಗಿದೆ ಎನ್ನಲಾಗುತ್ತಿದೆ.

ಘಟನೆ ಕಾಲೇಜಿನ ಆವರಣದಲ್ಲೇ ನಡೆದಿದ್ದು, ಕೆಲವೊಂದು ವಾರಗಳಿಂದಲೂ ಸ್ಮಾರ್ಟ್‌ಫೋನ್ ಕಳೆದು ಹೋಗುವ ಪ್ರಕರಣಗಳು ನಡೆಯುತ್ತಿದ್ದು ಇದೀಗ ದೊಡ್ಡ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ, ಸೆಕ್ಯುರಿಟಿ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕಾಲೇಜಿನ ಒಳಾಂಗಣ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದಾರೆ‌.

ಹೆಚ್ಚಿನ  ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಕೆಲವರು ತಮ್ಮ ಪರಿಶ್ರಮದ ಡೇಟಾ, ನೋಟ್ಸ್ ಹಾಗೂ ಡಿಜಿಟಲ್ ಟೂಲ್ಸ್ ಕಳೆದುಹೋದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ