image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುವಕನನ್ನು ಕೊಚ್ಚಿ ಕೊಲೆ - ಮತ್ತೋರ್ವನಿಗೆ ಗಾಯ

ಯುವಕನನ್ನು ಕೊಚ್ಚಿ ಕೊಲೆ - ಮತ್ತೋರ್ವನಿಗೆ ಗಾಯ

ಬಂಟ್ವಾಳ: ಯುವಕನೋರ್ವನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಂಟ್ವಾಳದ ಕುರಿಯಾಳದ ಕಾಂಬೋಡಿಯ ಇರಾಕೋಡಿಯಲ್ಲಿ ನಡೆದಿದೆ.

ಕೊಲ್ತಮಜಲು ನಿವಾಸಿ ರಹೀಂ ಎಂಬಾತ ಹತ್ಯೆಯಾದವನು. ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ. ರಹೀಂ ಜತೆಗಿದ್ದ ಯುವಕನೂ ಗಾಯಗೊಂಡಿದ್ದಾನೆ. ರಹೀಂ ಪಿಕಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ