image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಸಿಬಿ ಪೊಲೀಸರಿಂದ ಅಕ್ರಮ ಹುಕ್ಕಾ ಬಾರ್ ಗೆ ದಾಳಿ: ಮೂವರ ವಿರುದ್ದ ಕ್ರಮ

ಸಿಸಿಬಿ ಪೊಲೀಸರಿಂದ ಅಕ್ರಮ ಹುಕ್ಕಾ ಬಾರ್ ಗೆ ದಾಳಿ: ಮೂವರ ವಿರುದ್ದ ಕ್ರಮ

ಮಂಗಳೂರು:  ನಗರದ ಕಂಕನಾಡಿಯ ಮ್ಯಾಕ್ ಮಾಲ್ ನ ಪಾರ್ಕಿಂಗ್ ನಲ್ಲಿರುವ BLACK MOON RESTO CAFÉ ಎಂಬ ಹೆಸರಿನಲ್ಲಿ  ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಗೆ  ದಾಳಿ ನಡೆಸಿ,  ಅಕ್ರಮ ಹುಕ್ಕಾ ಬಾರ್ ನ್ನು ನಡೆಸುತ್ತಿದ್ದ ಆರೋಪಿಗಳಾದ 

1) ಸಿದ್ದಿಕ್ @ ಎಂ ಎಫ್ ಸಿ ಸಿದ್ದಿಕ್, 

2)ಅಬ್ದುಲ್ ನಾಸೀರ್, 

3)ಸಫ್ವಾನ್ ಎಂಬವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023-24 ಇಸವಿಯಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದಿದ್ದ ಇವರು ಕೆಫೆಟೇರಿಯಾ ನಡೆಸುವ ನೆಪದಲ್ಲಿ ಅಕ್ರಮ ಹುಕ್ಕಾ ಬಾರ್ ನ್ನು ನಡೆಸುತ್ತಿದ್ದರು. ಇವರು ನಿಯಮಗಳನ್ನು ಉಲ್ಲಂಘಿಸಿ ಯುವಕರನ್ನು ಮಾದಕ ಭ್ರಮಾ ಲೋಕದಲ್ಲಿ ತೇಲಿಸಿ ಹೆಚ್ಚಿನ ಹಣ ಸಂಪಾದಿಸಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಹುಕ್ಕಾ ಬಾರ್ ನಿಂದ ಹುಕ್ಕಾ ಸೇದುವ ಉಪಕರಣಗಳು, ತಂಬಾಕು ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಈ ಅಕ್ರಮ ಹುಕ್ಕಾ ಬಾರ್ ನ ದಾಳಿಯನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ ರವರ ನೇತೃತ್ವದಲ್ಲಿ ಪಿಎಸ್ಐ ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ಎಎಸ್ಐ ಸುಜನ್ ಶೆಟ್ಟಿ  ಹಾಗೂ ಸಿಸಿಬಿ ಸಿಬ್ಬಂದಿಯವರು ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪಿಎಸ್ಐ ಮನೋಹರ್ ಪ್ರಸಾದ್ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Category
ಕರಾವಳಿ ತರಂಗಿಣಿ