image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರ್ವೇ ಮೇಲ್ವಿಚಾರಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

ಸರ್ವೇ ಮೇಲ್ವಿಚಾರಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

ಮಂಗಳೂರು: ನಗರದಲ್ಲಿ ಸರ್ವೇ ಮೇಲ್ವಿಚಾರಕರೊಬ್ಬರ ಮನೆ, ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ  ವರದಿಯಾಗಿದೆ.

ಇದನ್ನು ಓದಿ: ವಿದಾನಸಭಾ ಸ್ಪೀಕರ್ ಗಳ ಸಮಿತಿಗೆ ಯು ಟಿ ಖಾದರ್ ಆಯ್ಕೆ

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಸರ್ವೇ ಮೇಲ್ವಿಚಾರಕ ಮಂಜುನಾಥ್ ಅವರ ಮಂಗಳೂರಿನ ಬಿಜೈ ನ 8ನೇ ಕ್ರಾಸ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.ಒಟ್ಟು 3 ಕಾರುಗಳಲ್ಲಿ ಬಂದಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರು ತುಮಕೂರು ಮೂಲದವರಾಗಿದ್ದಾರೆ.

Category
ಕರಾವಳಿ ತರಂಗಿಣಿ