ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಪ್ಪ ಗರ್ಡನ್ನಲ್ಲಿ ರೌಡಿಶೀಟರ್ ಶರತ್ ಎಂಬಾತನನ್ನ ಹತ್ಯೆ ಮಾಡಿರುವ ಆರೋಪದಡಿ ಮಾಜಿ ಕರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸೇರಿ ಆರು ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕಾಟನ್ಪೇಟೆ ಠಾಣೆ ರೌಡಿಶೀಟರ್ ಶರತ್ ಎಂಬಾತನನ್ನ ಹತ್ಯೆ ಮಾಡಿದ ಆರೋಪದಡಿ ಕರ್ಪೋರೇಟರ್ ಕೊಲೆ ಕೇಸ್ನಲ್ಲಿ ಬಂಧಿಯಾಗಿದ್ದ ಸ್ಟೀಫನ್ ಹಾಗೂ ಸಹಚರರಾದ ಚಂದ್ರಶೇಖರ್, ಶೇಖರ್, ಮಣಿಕಂಠ, ಸಿಂಬು, ಕಿರಣ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಮೃತ ಶರತ್ ಹಾಗೂ ಆರೋಪಿಗಳೆಲ್ಲರೂ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ರೌಡಿಶೀಟರ್ ಶರತ್, ಬಂಧಿತ ಆರೋಪಿಗಳಾದ ಚಂದ್ರಶೇಖರ್, ಶೇಖರ್ ಎಂಬುವರಿಗೆ ಕಾಟ ಕೊಟ್ಟು ಏರಿಯಾದಿಂದ ಬಿಡಿಸಿದ್ದ. ಚಂದ್ರಶೇಖರ್ ಸಹಚರನಾಗಿದ್ದ ಪ್ರಭಾಕರ್ನನ್ನು 2020 ಕೊಲೆ ಮಾಡಿದ ಪ್ರಕರಣದಲ್ಲಿ ಮೃತ ಶರತ್ ಆರೋಪಿಯಾಗಿದ್ದ. ಸ್ನೇಹಿತನನ್ನ ಹತ್ಯೆ ಮಾಡಿದ ಕೋಪದಲ್ಲಿದ್ದ ಚಂದ್ರಶೇಖರ್ಗೆ ಮತ್ತಷ್ಟು ಕಿರುಕುಳ ನೀಡಿದ್ದ. ಈತನ ಕಾಟ ತಾಳಲಾರದೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಚಂದ್ರಶೇಖರ್ ತನ್ನ ಸಹಚರರನ್ನ ಒಗ್ಗೂಡಿಸಿಕೊಂಡಿದ್ದ. ಇದೇ ವೇಳೆ, ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮೂರು ರ್ಷ ಜೈಲಿನಲ್ಲಿದ್ದು, ಕಳೆದ ತಿಂಗಳ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಸ್ಟೀಫನ್ನನ್ನ ಆರೋಪಿ ಗ್ಯಾಂಗ್ ಸಂರ್ಕ ಮಾಡಿತ್ತು. ಬಳಿಕ ಕೊಲೆಗೆ ಒಳಸಂಚು ರೂಪಿಸಿಕೊಂಡು ಮರ್ಚ್ ೮ರ ಶಿವರಾತ್ರಿ ಹಬ್ಬದಂದೇ ಡ್ರ್ಯಾಗರ್ನಿಂದ ಶರತ್ನನ್ನ ಹತ್ಯೆ ಮಾಡಲಾಗಿತ್ತು.