ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರು ಮತ್ತು ಶಾಂತಿನಗರ ಪ್ರದೇಶದಲ್ಲಿ ತಲವಾರು ಝಳಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಲಾಗಿದೆ.
ಬಿಜೈ ನಿವಾಸಿ ವಿಷ್ಣು (18) ಮತ್ತು ಕಾಪಿಕಾಡ್ ಆಕಾಶಭವನ ನಿವಾಸಿ ವೇಣುಗೋಪಾಲ್ (19) ಬಂಧಿತ ಆರೋಪಿಗಳಾಗಿದ್ದು,ಸುಹಾಸ್ ಹತ್ಯೆಯ ಮರುದಿನ ಮೇ 2ರಂದು ಸಂಜೆ ವೇಳೆ ಆರೋಪಿಗಳು ತಲವಾರು ತೋರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿ ಕೆಮರಾ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.