image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಾಲಿಬಾಲ್ ಆಟಗಾರನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ವಾಲಿಬಾಲ್ ಆಟಗಾರನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ : ಖಾಸಗಿ ಕಾಲೇಜಿನ ವಿದ್ಯಾರ್ಥಿ ಕಂ, ವಾಲಿಬಾಲ್ ಆಟಗಾರ ಸೈಯದ್​​ ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಆತನಿಗೆ ಹಲ್ಲೆ ನಡೆದ ಘಟನೆ ನಡೆದಿದೆ.  ಈ ಸಂದರ್ಭದಲ್ಲಿ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದಿದೆ.

ಸೈಯದ್​ ಮೂಲತಃ ಕಾರ್ಕಳ ನಿವಾಸಿ. ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ವಾಲಿಬಾಲ್ ಆಟಗಾರ ಕೂಡ ಹೌದು. ಓರ್ವ ವಿದ್ಯಾರ್ಥಿನಿಗೆ ಸೈಯದ್ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಆತನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತ್ತ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೈಯದ್​​ ಕೂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ. ಉಜಿರೆಯ ಮನೋಜ್ ಮತ್ತು ಪ್ರಜ್ವಲ್ ಗೌಡ ಎಂಬುವವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Category
ಕರಾವಳಿ ತರಂಗಿಣಿ