image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೀನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ದೂರು: ದಿಲೀಪ್ ಕುಮಾ‌ರ್ ಗೆ ಬಂಧನ ಭೀತಿ

ಜೀನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ದೂರು: ದಿಲೀಪ್ ಕುಮಾ‌ರ್ ಗೆ ಬಂಧನ ಭೀತಿ

ತುಮಕೂರು:  ಶಿರಾ ತಾಲೂಕಿನ ಯರಗುಂಟೆಯಲ್ಲಿರುವ ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ (Physical abuse) ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ, ಕಳೆದ 15 ದಿನಗಳಿಂದ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ, ನನ್ನನ್ನು ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ದೂರು ನೀಡಿದ್ದರೂ ಕೇಸು ದಾಖಲಿಸದೆ ಪೊಲೀಸರು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಈಗ ಜೀನಿ ಮಾಲಿಕನಿಗೆ ಬಂಧನದ ಭೀತಿ ಎದುರಾಗಿದೆ.

ಈ ನಡುವೆ ಜೀನಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಯತ್ನ ನಡೆಯುತ್ತಿದೆ ಎಂದು ಮಾಲಿಕ ದಿಲೀಪ್‌ ಕುಮಾರ್ ಆರೋಪಿದ್ದು, ಆರೋಪ ಮಾಡಿರುವ ಮಹಿಳೆ ಹತ್ತು ತಿಂಗಳ ಹಿಂದೆ ಜೀನಿ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದು, ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಕೆಲಸದಿಂದ ತೆಗೆದುಹಾಕಲಾಗಿದೆ. ಹೀಗಾಗಿ ಮಂಗಳವಾರ ನಮ್ಮ ಸಂಸ್ಥೆಯ ಮುಂದೆ ಹತ್ತು ಜನರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ನಾನು ಮಹಿಳೆಗೆ ಯಾವುದೇ ಲೈಂಗಿಕ ಕಿರುಕಳ ನೀಡಿಲ್ಲ. ಕಳೆದ ಒಂದು ವರ್ಷದಿಂದ ನನ್ನ ಮೇಲೆ ವಿವಿಧ ರಾಜಕೀಯ ಮುಖಂಡರು ಹನಿ ಟ್ರ್ಯಾಪ್ ಮಾಡಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲರಾಗಿದ್ದಾರೆ.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜನಪ್ರಿಯತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನನಗೆ ತೊಂದರೆ ನೀಡಿ, ಜೀನಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಹಲವರು ಯತ್ನಿಸುತ್ತಿರುತ್ತಾರೆ ಎಂದಿದ್ದಾರೆ.

Category
ಕರಾವಳಿ ತರಂಗಿಣಿ