image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಪ್ಪನಂತೆ ಡಾನ್ ಆಗಬೇಕೆನ್ನುವ ಆಸೆಯಲ್ಲಿ ಶೂಟ್ ಔಟ್ ಕತೆ ಕಟ್ಟಿದರಾ ಮಾಜಿ ಡಾನ್ ಮಗ...!

ಅಪ್ಪನಂತೆ ಡಾನ್ ಆಗಬೇಕೆನ್ನುವ ಆಸೆಯಲ್ಲಿ ಶೂಟ್ ಔಟ್ ಕತೆ ಕಟ್ಟಿದರಾ ಮಾಜಿ ಡಾನ್ ಮಗ...!

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ನಡೆದಿದ್ದ ಗುಂಡಿನ ದಾಳಿ ಕೇಸ್ ಈಗ ಟ್ವಿಸ್ಟ್ ಪಡೆದುಕೊಂಡಿದ್ದು, ತಾನೆ ಶೂಟ್ ಔಟ್ ನಾಟಕ ಮಾಡಿ under world ನಲ್ಲಿ ತಂದೆಯಂತೆ ಹವಾ create ಮಾಡಿ, ಮುನ್ನಲೆಗೆ ಬರುವ ಬಯಕೆ ಇತ್ತಾ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. 

ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್ ಮ್ಯಾನ್ ಆಗಿದ್ದ ವಿಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಮಾಜಿ ಗನ್ ಮ್ಯಾನ್‌ ವಿಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಠಲ ಬಹುಕಾಲದವರೆಗೆ ರಿಕ್ಕಿ ರೈನ ಗನ್ ಮ್ಯಾನ್ ಆಗಿದ್ದ. ಅನಾರೋಗ್ಯ ಹಿನ್ನೆಲೆ ರಿಕ್ಕಿ ಫಾರ್ಮ್ ಹೌಸ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾನೆ. ಶೂಟೌಟ್ ರಾತ್ರಿ ವಿಠಲ, ರಿಕ್ಕಿ ರೈ  ಜೊತೆಗೆ ಪರ್ಸನಲ್ ಆಗಿ ಮಾತನಾಡಿದ್ದಾನೆ ಎನ್ನಲಾಗಿದ್ದು, ರಿಕ್ಕಿ ಕಾರು ಹೊರಡುವ ಸ್ವಲ್ಪ ಸಮಯದ ಮುನ್ನ ವಿಠಲ ಫಾರ್ಮ್ ಹೌಸ್‌ನಿಂದ ಹೊರಗೆ ಹೋಗಿದ್ದಾನೆ. ಶೂಟೌಟ್ ನಡೆದು ರಿಕ್ಕಿ ಆಸ್ಪತ್ರೆ ಸೇರಿದ ಬಳಿಕ ವಿಠಲ ಫಾರ್ಮ್ ಹೌಸ್‌ಗೆ ಬಂದಿದ್ದು, ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

Category
ಕರಾವಳಿ ತರಂಗಿಣಿ